6 Skip to content

ಕಾಳಮ್ಮನಗರದ ರಂಜಿತಾ ಮನೆಗೆ ಪ್ರಮೋದ ಮುತಾಲಿಕ ಭೇಟಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

ಯಲ್ಲಾಪುರದ ಕಾಳಮ್ಮನಗರದಲ್ಲಿ ಕೊಲೆಯಾದ ರಂಜಿತಾ ಬನ್ಸೋಡೆ ಮನೆಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ಇಂತಹ ಅಮಾನವೀಯ ಕೃತ್ಯ ನಡೆಯಬಾರದಿತ್ತು. ದುಃಖದಲ್ಲಿರುವ ಕುಟುಂಬಕ್ಕೆ ಹಿಂದು ಸಂಘಟನೆಗಳು ಸದಾ ಬೆಂಬಲವಾಗಿ ನಿಲ್ಲುತ್ತವೆ ಎಂದು ಧೈರ್ಯ ಹೇಳಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ, ಮತಕ್ಕಾಗಿ ಜಿಹಾದಿಗಳನ್ನು, ಕೊಲೆಗಡುಕರನ್ನು, ಗೋ ಹಂತಕರ‌್ನು ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಗೆ ನಾಚಿಕೆ, ಮಾನ, ಮರ್ಯಾದೆ, ದೇಶಭಕ್ತಿ ಯಾವುದೂ ಇಲ್ಲ. ಮುಸ್ಲೀಮರ ರಾಕ್ಷಸೀ ಪ್ರವೃತ್ತಿ, ಅಮಾನವೀಯತೆಯೇ ಕಾಂಗ್ರೆಸಿನಲ್ಲಿರುವ ಹಿಂದುಗಳನ್ನೂ ನುಂಗಿ ಹಾಕಲಿದೆ ಎಂದು ಹೇಳಿದರು.
ಸರ್ಕಾರ, ಪೊಲೀಸ್ ಇಲಾಖೆ, ನ್ಯಾಯಾಲಯ ಹೇಗೆ ಬೇಕಾದರೂ ನಡೆದುಕೊಳ್ಳುತ್ತದೆ. ಇದಕ್ಕೆ ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣವೇ ಸಾಕ್ಷಿ. ಅಮಾನವೀಯವಾಗಿ ಆಕೆಯನ್ನು ಕೊಚ್ಚಿ ಕೊಂದಿರುವ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದು ಯಾವ ರೀತಿಯ ನ್ಯಾಯ ವ್ಯವಸ್ಥೆ ಎಂದು ಪ್ರಶ್ನಿಸಿದರು.

ಯಲ್ಲಾಪುರದ ರಂಜಿತಾರನ್ನು ಹಲಾಲ್ ಮಾದರಿಯಲ್ಲಿ ಕತ್ತರಿಸಿ ಹಾಕಿರುವುದು ಖಂಡನೀಯ.‌ ಕೊಲೆ ಮಾಡಿದ ವ್ಯಕ್ತಿ ಸತ್ತರೂ, ಕೊಲೆ, ಗೋಹತ್ಯೆ, ಲವ್ ಜಿಹಾದ್ ನಂತಹ ಕೃತ್ಯ ಮಾಡುವ ಮಾನಸಿಕತೆ ಸಾಯುವುದಿಲ್ಲ. ಅಂತಹ ಮಾನಸಿಕತೆ ಇಸ್ಲಾಂನ ಮೂಲದಲ್ಲೇ ಇದೆ. ಈ ಪ್ರವೃತ್ತಿಯನ್ನು ತಡೆಯುವ ಬಗ್ಗೆ ಸರ್ಕಾರ, ರಾಜಕಾರಣಿಗಳು, ಸಮಾಜ ಚಿಂತನೆ ಮಾಡಬೇಕಾಗಿದೆ. ಈ ವಿಚಾರದಲ್ಲಿ ಹಿಂದು ಸಂಘಟನೆಗಳು ಒಗ್ಗೂಡಿ ಬೀದಿಗಿಳಿದು ಹೋರಾಟ ಮಾಡಲಿವೆ ಎಂದರು.

ಬಳ್ಳಾರಿಯಲ್ಲಿ ಹತ್ಯೆಯಾದ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ತಕ್ಷಣ ಹೋಗಿ 25 ಲಕ್ಷ ರೂ ಪರಿಹಾರ ನೀಡಲಾಗಿದೆ. ಯಲ್ಲಾಪುರದಲ್ಲಿ ದಲಿತ ಮಹಿಳೆಯ ಕೊಲೆಯಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಕಾಂಗ್ರೆಸ್ ನ ಯಾವುದೇ ಸಚಿವರು, ಶಾಸಕರು ಭೇಟಿ ನೀಡಿಲ್ಲ. ದಲಿತ ಮಹಿಳೆಯನ್ನು ಅಮಾನವೀಯವಾಗಿ ಕೊಂದಿರುವ ವಿಚಾರ ಕಾಂಗ್ರೆಸ್ ಸರ್ಕಾರಕ್ಕೆ ಗಂಭೀರ ವಿಷಯವಾಗಿಲ್ಲ ಎಂದು ಟೀಕಿಸಿದರು.

‘ಹೆಣದ ಮೇಲೆ ರಾಜಕೀಯ ಮಾಡಬೇಡಿ’ ಎಂದು ಕ್ಷೇತ್ರದ ಶಾಸಕರು ಹೇಳುತ್ತಾರೆ.‌ ಅವರಿಗೆ ನಿಜವಾಗಿ ದಲಿತರ ಮೇಲೆ ಕಾಳಜಿ ಇದ್ದರೆ ಮೃತ ಮಹಿಳೆಯ ಕುಟುಂಬಕ್ಕೆ 2 ಎಕರೆ ಕೃಷಿ ಭೂಮಿ, 50 ಲಕ್ಷ ರೂ ಪರಿಹಾರ ಕೊಡಿಸಲಿ ಎಂದ ಅವರು, ದಲಿತರನ್ನು ರಾಜಕಾರಣಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾತೆ. ಕ್ಷೇತ್ರದ ದಲಿತರೆಲ್ಲ ಮುಂದಿನ ಚುನಾವಣೆಯಲ್ಲಿ ಒಂದು ಮತವನ್ನೂ ಕಾಂಗ್ರೆಸಿಗೆ ಹಾಕದೇ ತಕ್ಕ ಬುದ್ದಿ ಕಲಿಸಬೇಕು ಎಂದು ಹೇಳಿದರು.

ಮದನೂರಿನಲ್ಲಿ ಅಪ್ರಾಪ್ತ ದಲಿತ ಯುವತಿಯ ಮೇಲೆ ಅತ್ಯಾಚಾರದ ಯತ್ನ ನಡೆದಿತ್ತು. ಕಿರವತ್ತಿಯಲ್ಲಿ ಮೆರವಣಿಗೆಯೊಂದರಲ್ಲಿ ಪಾಕಿಸ್ತಾನದ ಧ್ವಜ ಹಾರಿಸಲಾಗಿತ್ತು. ಈ ವಿಚಾರವಾಗಿ ಸ್ಥಳೀಯ ಶಾಸಕರು ಒಂದೂ ಮಾತನಾಡಿಲ್ಲ. ದೇಶದ್ರೋಹಿಗಳನ್ನು ತಡೆಯದೇ ಹೋದಲ್ಲಿ ಒಂದು ದಿನ ಶಾಸಕರ ಮನೆಯ ಮೇಲೂ ಧ್ವಜ ಹಾರಿಸುತ್ತಾರೆ ಎಂದು ಎಚ್ಚರಿಸಿದರು.

ಕರ್ನಾಟಕ ಉತ್ತರ ರಾಜ್ಯದ ಗೌರವಾಧ್ಯಕ್ಷ ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ, ಜಿಲ್ಲಾಧ್ಯಕ್ಷ ಮಂಜುನಾಥ ಕೆ.ಎಚ್, ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಮಹಾಲಿಂಗ ಐಗಳಿ, ಧಾರವಾಡ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಟ್ಕರ್, ಹರೀಶ ಪೂಜಾರಿ, ಸೋಮೇಶ್ವರ ನಾಯ್ಕ, ಶ್ರೀಪಾದ ಭಟ್ಟ, ಬಾಬು ಬಾಂದೇಕರ್, ಸಿದ್ದಾರ್ಥ ನಂದೊಳ್ಳಿಮಠ, ಕಿರಣ ಚೌಹಾಣ ಇತರರಿದ್ದರು.

You cannot copy content of this page