ಜುಲೈ 10ರ ಬುಧವಾರ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನ. 63 ವರ್ಷ ಪೂರೈಸಿದ ಅವರ 64ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನಲೆ ಅವರಿಗೆ ಸಾಕಷ್ಟು ಜನ ಶುಭ ಕೋರುತ್ತಿದ್ದಾರೆ.
ಯಲ್ಲಾಪುರ ಬಿಜೆಪಿ ಘಟಕದವರು ಸಂಸದರ ಜನ್ಮದಿನದ ಹಿನ್ನಲೆ ವನವಾಸಿ ವಿದ್ಯಾರ್ಥಿಗಳಿಗೆ ನೆರವು ನೀಡಿದ್ದಾರೆ. ಬಿಜೆಪಿಯ ಹಿರಿಯ ಕಾರ್ಯಕರ್ತ ಗಣಪತಿ ಬೋಳಗುಡ್ಡೆ ಮಕ್ಕಳಿಗೆ ಸಿಹಿ ತಿನಿಸಿದರು. ಬಿಜೆಪಿಯ ನಿಕಟಪೂರ್ವ ತಾಲೂಕಾಧ್ಯಕ್ಷ ಜಿ ಎನ್ ಗಾಂವ್ಕರ್ ಮಕ್ಕಳಿಗೆ ಶಾಲು ವಿತರಿಸಿದರು. ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಮಕ್ಕಳ ಜೊತೆ ಸೇರಿ ಕಾಗೇರಿಯವರ ಆರೋಗ್ಯ ಹಾಗೂ ಆಯಸ್ಸು ವೃದ್ಧಿಗೆ ಪ್ರಾರ್ಥಿಸಿದರು. ಯುವಮೋರ್ಚಾ ಉಪಾಧ್ಯಕ್ಷ ಪ್ರದೀಪ ಯಲ್ಲಾಪುರಕರ್ ಉತ್ತರ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಂಸದ ಕಾಗೇರಿಯವರ ಪ್ರಯತ್ನ ನಿರಂತರವಾಗಿರಲಿ ಎಂದು ಹಾರೈಸಿದರು. ಈ ವೇಳೆ ಅಲ್ಲಿದ್ದ ವಿದ್ಯಾರ್ಥಿಗಳು ದೇಶಭಕ್ತಿಗಳನ್ನು ಹಾಡಿ, ಸಂಸದರಿಗೆ ಶುಭಕೋರಿದರು.
Discussion about this post