ಜೋಯಿಡಾ: ಬೆಳಗಾವಿ-ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಿನೈಘಾಟದಿಂದ ಅನಮೋಡವರೆಗೆ ಸಂಪೂರ್ಣ ಹಾಳಾಗಿದೆ. ಇದರಿಂದ ವಾಹನಸವಾರರು ಹೈರಣಾಗಿದ್ದಾರೆ.
ರಾಮನಗರದಿಂದ ಅನಮೋಡವರೆಗೆ ರಸ್ತೆ ಕೆಲಸ ಪ್ರಾರಂಭಿಸಿ ಆರು ವರ್ಷ ಕಳೆದಿದೆ. ಆದರೂ ಕೆಲಸ ಮುಗಿದಿಲ್ಲ. ಗುತ್ತಿಗೆಪಡೆದ ಡಿ.ಪಿ.ಎಲ್ ಕಂಪನಿ ಅರೆಬರೆ ಕೆಲಸ ಮಾಡಿದ್ದು, ರಸ್ತೆಯ ಎಲ್ಲಾ ಕಡೆ ಹೊಂಡಗಳು ಕಾಣುತ್ತಿವೆ. ಇದರಿಂದ ಅಪಘಾತಗಳ ಪ್ರಮಾಣವೂ ಹೆಚ್ಚಾಗಿದೆ. ರಾತ್ರಿ ಅವಧಿಯಲ್ಲಿ ಸಂಚರಿಸುವವರಿಗೆ ರಸ್ತೆಯ ಹೊಂಡ ಗುರುತಿಸುವುದೇ ದೊಡ್ಡ ಕೆಲಸವಾಗಿದೆ.
ಮಳೆಗಾಲಲದಲ್ಲಿ ಹೊಂಡದ ಆಳ-ಅಗಲ ಅಳೆದು ವಾಹನ ಓಡಿಸುವುದು ಸವಾಲಾಗಿದೆ. ಪ್ರತಿ ವರ್ಷ ಹೆದ್ದಾರಿ ಪ್ರಾಧಿಕಾರ ಹೊಂಡ ಮುಚ್ಚುತ್ತದೆ. ಆದರೆ, ಮಳೆಗಾಲದಲ್ಲಿ ಮತ್ತೆ ಹೊಂಡ ಬೀಳುತ್ತದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂಬುದು ಜನರ ದೂರು.
ಶಾಲಾ ಮಕ್ಕಳಿಗೂ ಸಮಸ್ಯೆ:
ರಸ್ತೆ ಹಾಳಾದ ಕಾರಣ ಈ ಭಾಗದ ಶಾಲಾ ಮಕ್ಕಳಿಗೆ ಸರಿಯಾದ ಸಮಯಕ್ಕೆ ಬಸ್ಸುಗಳನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಬಸ್ಸಿನಲ್ಲಿಯೂ ಸಾಮರ್ಥ್ಯಕ್ಕಿಂತ ಅಧಿಕ ಪ್ರಯಾಣಿಕರನ್ನು ತುಂಬುವುದರಿAದ ಬಸ್ಸು ಹೊಂಡಗಳನ್ನು ಹಾರಿದಾಗ ಮೂಳೆ ಮುರಿದ ಅನುಭವ ಆಗುವುದು ಸಾಮಾನ್ಯ.
ಜಲ್ಲಿಕಲ್ಲಾದರೂ ಹಾಕಿ:
`ಶಾಸಕ ಆರ್ ವಿ ದೇಶಪಾಂಡೆ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲಿನವರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ತುರ್ತಾಗಿ ಹೆದ್ದಾರಿ ಹೊಂಡಕ್ಕೆ ಜಲ್ಲಿ ಕಲ್ಲುಗಳನ್ನಾದರೂ ಹಾಕಿ ಅಪಘಾತದ ಪ್ರಮಾಣ ತಪ್ಪಿಸಬೇಕು’ ಎಂಬುದು ಜನರ ಮನವಿ.
ಸುದ್ದಿ ಕೃಫೆ: ಸಂದೇಶ ದೇಸಾಯಿ, `ನುಡಿಜೇನು’
Discussion about this post