ಹಳಿಯಾಳ: ಮೂರು ದಿನಗಳ ಹಿಂದೆ ಕುರಿಗದ್ದಾ ಗ್ರಾಮದಲ್ಲಿ ನಡೆದ ಕಬ್ಬಿಣ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿ ಪೊಲೀಸರು ಮಡ್ಡಿ ಪ್ರದೇಶದ ಇಸ್ಮಾಯಿಲ್ ಅತ್ತಾರ ಹಾಗೂ ಸಿದ್ದರಾಮೇಶ್ವರಗಲ್ಲಿಯ ಶಶಿ ಸಹದೇವ ವಡ್ಡರ ಎಂಬಾತರನ್ನು ಬಂಧಿಸಿದ್ದಾರೆ. ಬಂಧಿತರಿoದ ಕಬ್ಬಿಣದ ಸರಳಿನ ಬಂಡಲ್’ಗಳನ್ನು ವಶಕ್ಕೆ ಪಡೆದಿದ್ದು, ಕಳ್ಳತನಕ್ಕೆ ಬಳಸಿದ್ದ ಲಾರಿಯನ್ನು ಜಪ್ತು ಮಾಡಿದ್ದಾರೆ.
ಕಟ್ಟಡ ನಿರ್ಮಾಣಕ್ಕಾಗಿ ಅಸ್ಲಾಂ ಮುಲ್ಲಾ ಎಂಬಾತರು ಕಬ್ಬಿಣ ಖರೀದಿಸಿ ಇರಿಸಿದ್ದರು. ಇದನ್ನು ಕಳ್ಳರು ಕದ್ದು ಪುರಸಭಾ ಸದಸ್ಯನ ಮನೆಯಂಗಳಕ್ಕೆ ಸಾಗಿಸಿದ್ದರು. ಈ ಪುರಸಭಾ ಸದಸ್ಯ ಕದ್ದ ಕಬ್ಬಿಣಗಳನ್ನು ಬೇರೆ ಕಡೆ ಮಾರುವ ವೃತ್ತಿಯನ್ನಾಗಿಸಿಕೊಂಡಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ. ಪ್ರಸ್ತುತ ಪುರಸಭಾ ಸದಸ್ಯನ ಮನೆಯಿಂದಲೇ ಪೊಲೀಸರು ಕಬ್ಬಿಣವನ್ನು ವಶಕ್ಕೆ ಪಡೆದಿದ್ದಾರೆ.
Discussion about this post