6 Skip to content

ಅಂಕೋಲಾ: ಅಧಿಕಾರಿಗಳ ಚಳಿ ಬಿಡಿಸಿದ ಶಾಸಕ

ಅಂಕೋಲಾ: ಧಾರಾಕಾರ ಮಳೆಗೆ ಬಡವರ ಮನೆಗಳಿಗೆ ಹಾನಿಯಾಗಿದ್ದು, ಹಾನಿಗೆ ಒಳಪಡಬಹುದಾದ ಪ್ರದೇಶಗಳ ಪಟ್ಟಿ ನೀಡುವಲ್ಲಿ ವಿಫಲವಾದ ಅಧಿಕಾರಿಗಳನ್ನು ಶಾಸಕ ಸತೀಶ್ ಸೈಲ್ ತರಾಟೆಗೆ ತೆಗೆದುಕೊಂಡರು.
ಹಾರವಾಡದಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಮೀನುಗಾರರ ಗುಡಿಸಲುಗಳಿಗೆ ಹಾನಿಯಾಗಿದೆ. ಇದನ್ನು ಪರಿಶೀಲಿಸಿದ ಸೈಲ್ `ಮೀನುಗಾರರ ಸಮಸ್ಯೆಗೆ ಅಧಿಕಾರಿಳು ಸ್ಪಂದಿಸಬೇಕು’ ಎಂದು ಸೂಚಿಸಿದರು. `ಪ್ರವಾಹದ ಸೂಚನೆ ಬಂದ ತಕ್ಷಣ ಅದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.
ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಅಥಿಕ್ ಹಾಗೂ ಸರ್ಕಾರದ ಕಾರ್ಯದರ್ಶಿ ಡಾ.ಎನ್ ಮಂಜುಳಾ ಅವರಿಗೆ ಫೋನ್ ಮಾಡಿ ಕಡಲು ಕೊರೆತ ಸಮಸ್ಯೆ ಬಗೆಹರಿಸುವಂತೆ ಹೇಳಿದರು.

Leave a comment

Leave a Reply

You cannot copy content of this page