6 Skip to content

ಮಹಿಳೆಯ ಜೀವ ಉಳಿಸಲು ರಿಕ್ಷಾ ಚಾಲಕರ ಗುದ್ದಾಟ: ಕೊನೆಗೂ ಫಲ ನೀಡದ ಪ್ರಯತ್ನ

ಬೈಕಿನಿಂದ ಬಿದ್ದು ರಕ್ತದ ಮೊಡವಿನಲ್ಲಿ ಒದ್ದಾಡುತ್ತಿದ್ದ ಜಯಶ್ರೀ ಗೌಡ (44) ಎಂಬಾತರ ಜೀವ ಉಳಿಸಲು ಕುಮಟಾದ ರಿಕ್ಷಾ ಚಾಲಕ ರಾಜಕಿರಣ ನಾಯ್ಕ ಹಾಗೂ ಪುಂಡಲಿಕ ಗೌಡ ದಿನವಿಡೀ ಗುದ್ದಾಡಿದ್ದು, ಕೊನೆಗೂ ಅವರ ಪ್ರಯತ್ನ ಫಲ ಕೊಡಲಿಲ್ಲ.

ಕುಮಟಾದ ಗುಜರ್‌ಗಲ್ಲಿಯಲ್ಲಿ ರಿಕ್ಷಾ ಓಡಿಸುವ ರಾಜಕಿರಣ್ ಜುಲೈ 9ರಂದು ಹೆರವಟ್ಟಾದ ಪುಂಡಲಿಕ ಗೌಡರನ್ನು ಭಟ್ಕಳಕ್ಕೆ ಕರೆದೊಯ್ಯುತ್ತಿದ್ದರು. ಪುಂಡಲಿಕ ಗೌಡ ರಿಕ್ಷಾ ಹಾಳಾಗಿದ್ದು, ಭಟ್ಕಳದಿಂದ ರಿಪೇರಿ ಮಾಡಿಸಿಕೊಂಡು ಬರಲು ಅವರು ಹೊರಟಿದ್ದರು. ಆಗ, ಹೊನ್ನಾವರದ ಹಳದಿಪುರದ ಸಾಲಕೇರಿ ಗಣಪತಿ ದೇವಸ್ಥಾನದ ಬಳಿ ಬೈಕ್ ಅಪಘಾತವಾಗಿ ಬ್ಯುಟಿಶ್ಯನ್ ಆಗಿದ್ದ ಜಯಶ್ರೀ ಗೌಡ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳು ಸಹ ರಿಕ್ಷಾ ಚಾಲಕರೇ ಆದ ನಾಗು ಗೌಡ ಅವರ ಪತ್ನಿಯಾಗಿದ್ದು, ಸ್ನೇಹಿತನ ಪತ್ನಿ ಗಂಭೀರಗಾಯಗೊoಡಿದನ್ನು ನೋಡಿ ಆ ಇಬ್ಬರು ರಿಕ್ಷಾ ಚಾಲಕರು ತಕ್ಷಣ ನೆರವಿಗೆ ಬಂದರು. ರಾಜಕಿರಣ ಹಾಗೂ ಪುಂಡಲಿಕ್ ಸೇರಿ ಗಾಯಗೊಂಡ ಜಯಶ್ರೀ ಹಾಗೂ ನಾಗು ಗೌಡರನ್ನು ತಾವು ಸಂಚರಿಸುತ್ತಿದ್ದ ರಿಕ್ಷಾದಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದೊಯ್ದರು.

ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕರೆದೊಯ್ಯುವಂತೆ ತಿಳಿಸಿದ ಕಾರಣ ಜಯಶ್ರೀ ಅವರ ಸಂಬAಧಿಕರಾದ ಮಹೇಶ್ ಗೌಡ ಹಾಗೂ ಗಣೇಶ್ ಗೌಡರ ಜೊತೆ ರಾಜಕಿರಣ್ ಸಹ ಗಾಯಾಳುವನ್ನು ಕರೆದುಕೊಂಡು ಆಂಬುಲೆನ್ಸ್ ಮೂಲಕ ಉಡುಪಿಗೆ ತೆರಳಿದರು. ಆದರೆ, ಬ್ರಹ್ಮಾವರ ಬಳಿ ತಲುಪಿದಾಗ ಜಯಶ್ರೀ ಕೊನೆ ಉಸಿರೆಳೆದರು. `ತಲೆ ಒಡೆದು ರಕ್ತ ಬರುತ್ತಿದ್ದರೂ ಆಕೆಯನ್ನು ಬದುಕಿಸುವ ಪ್ರಯತ್ನ ನಡೆಸಿದೆವು. ಎಷ್ಟೇ ಕಷ್ಟಪಟ್ಟರೂ ಸ್ನೇಹಿತನ ಪತ್ನಿಯನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ರಾಜಕಿರಣ್ ಕಣ್ಣೀರು ಹಾಕಿದರು. ಪತ್ನಿ ಅಗಲುವಿಕೆಯಿಂದ ನೋವುಂಡ ಸ್ನೇಹಿತ ನಾಗುವಿಗೆ ನೆರವು ನೀಡಿದ ಆ ಇಬ್ಬರು ರಿಕ್ಷಾ ಚಾಲಕರು ಸಮಾಧಾನ ಮಾಡಿದರು.

Leave a comment

Leave a Reply

You cannot copy content of this page