ಯಲ್ಲಾಪುರ: ಸಂಸದ ವಿಶ್ವೇಶ್ವರ ಹೆಗಡೆ ಅವರ ಆರೋಗ್ಯ ಹಾಗೂ ಆಯಸ್ಸು ವೃದ್ಧಿಗಾಗಿ ಅವರ ಬೆಂಬಲಿಗರು ವಜ್ರಳ್ಳಿಯಲ್ಲಿರುವ ವಜ್ರೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜುಲೈ 10ರಂದು 64ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆ ಅರ್ಚಕ ತಿಮ್ಮಣ್ಣ ಕೋಮಾರ್ ಪೂಜಾ ಕಾರ್ಯ ನೆರವೇರಿಸಿದರು. ಕಾಗೇರಿಯವರ ಅಭಿಮಾನಿಗಳು ಸಿಹಿ ವಿತರಿಸಿದರು. `ದೇಶದ ಅಭಿವೃದ್ಧಿಯಲ್ಲಿ ಸಂಸದರ ಪಾತ್ರ ಅತಿ ದೊಡ್ಡದು. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅವರಿಂದ ನಿರಂತರ ಪ್ರಯತ್ನ ನಡೆಯಲಿ. ಅವರಿಗೆ ಒಳಿತುಬಯಸಿ ಪೂಜೆ ಸಲ್ಲಿಸಿದ್ದೇವೆ’ ಎಂದು ಬಿಜೆಪಿ ಮುಖಂಡ ಉಮೇಶ ಭಾಗ್ವತ ತಿಳಿಸಿದರು.
ಪ್ರಮುಖರಾದ ದತ್ತಾತ್ರೇಯ ಭಟ್ಟ, ತಾರಗಾರ, ಜಿ ಆರ್ ಭಾಗ್ವತ, ವೀಣಾ ಗಾಂವ್ಕರ್, ತಿಮ್ಮಣ್ಣ ಗಾಂವ್ಕರ್, ಮಹೇಶ ಗಾಂವ್ಕರ್, ನವೀನ ಕಿರಗಾರೆ ಇದ್ದರು.
ಕಾಗೇರಿ ಜನ್ಮದಿನ: ವಜ್ರಳ್ಳಿಯಲ್ಲಿ ವಿಶೇಷ ಪೂಜೆ

Leave a comment