ಜೊಯಿಡಾ: ಇಳಿವೆದಾಬೆಯ ಅಪ್ಪು ನಾರಾಯಣ ದೇಸಾಯಿ (80) ಎಂಬಾತರು ಟ್ಯಾಂಕರಿಗೆ ತಮ್ಮ ಸ್ಕೂಟಿ ಗುದ್ದಿ ಗಾಯಗೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾರೆ.
ಜೂನ್ 19ರಂದು ಆಸು ಗ್ರಾಮದಿಂದ ಸ್ಕೂಟಿ ಚಲಾಯಿಸಿಕೊಂಡು ಹೋಗಿದ್ದ ಅವರು ಜಗಲಪೇಟೆ ಕ್ಯಾಸಲರಾಕ್ ರಸ್ತೆಯಲ್ಲಿ ಹೋಗುತ್ತಿದ್ದ ಟ್ಯಾಂಕರ್’ಗೆ ಹಿಂದಿನಿoದ ಗುದ್ದಿದ್ದರು. ಈ ವೇಳೆ ಟ್ಯಾಂಕರಿನ ಚಕ್ರಕ್ಕೆ ಸಿಲುಕಿ ಅವರು ಗಾಯಗೊಂಡಿದ್ದರು. ಅವರನ್ನು ಬೆಳಗಾವಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು, ಜುಲೈ 9ರಂದು ಅಲ್ಲಿಯೇ ಸಾವನಪ್ಪಿದ್ದಾರೆ.





Discussion about this post