ಕಾರವಾರ: ಮೂಲಭೂತ ಸೌಕರ್ಯ ಕೊರತೆ, ಸಿಬ್ಬಂದಿ ಕೊರತೆ, ದಾಖಲೆಗಳ ಸೂಕ್ತ ನಿರ್ವಹಣೆ ಇಲ್ಲದಿರುವಿಕೆ ಹಿನ್ನಲೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿಗೆ 3 ಲಕ್ಷ ರೂ ದಂಡ ವಿಧಿಸಿದೆ.
ಈ ಹಿಂದೆ ಹಾಸ್ಟೆಲ್‌ಗಳ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನಲೆ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಕಾರವಾರದ ಕ್ರಿಮ್ಸ್ ಮೆಡಿಕಲ್ ಕಾಲೇಜಿಗೆ ಎನ್‌ಎಂಸಿ ಭೇಟಿ ನೀಡಿ, ಪರಿಶೀಲಿಸಿದ್ದು, ನಂತರ ಈ ದಂಡ ವಿಧಿಸಿದೆ. ಇದರೊಂದಿಗೆ ರಾಜ್ಯದ ಒಟ್ಟು 27 ಮೆಡಿಕಲ್ ಕಾಲೇಜಿಗೆ ದಂಡದ ಬಿಸಿ ತಾಗಿದೆ.




Discussion about this post