6 Skip to content

ಸ್ಕೂಟಿಯಲ್ಲಿ ತ್ರಿಬಲ್ ರೈಡ್: ಮೀನು ಮಾರಾಟಗಾರನ ಕಾರು ಅಪಘಾತ!

ಕಾರವಾರ: ಮೂವರು ಸಂಚರಿಸುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ತಸ್ಲಿಂ ಅಲಿ ಎಂಬಾತ ಕಾರನ್ನು ಡಿವೈಡರ್’ಗೆ ಗುದ್ದಿದ್ದಾನೆ.
ಜುಲೈ 12ರಂದು ಕಾಜುಭಾಗದ ಮೀನು ವ್ಯಾಪಾರಿ ತಸ್ಲಿಂ ಅಲಿ ಗೋವಾದಿಂದ ಕಾರವಾರದ ಕಡೆ ಬರುತ್ತಿದ್ದಾಗ ಗಾಂವoಕೇರಿ ತಿರುವಿನ ಬಳಿ ಸ್ಕೂಟಿಯಲ್ಲಿ ಮೂವರು ಸಂಚರಿಸುತ್ತಿದ್ದರು. ಈ ಸ್ಕೂಟಿಯನ್ನು ಪರಶುರಾಮ್ ಓಡಿಸುತ್ತಿದ್ದು, ರವಿ ಮತ್ತು ಸಿದ್ದಪ್ಪ ಹಿಂದೆ ಕೂತಿದ್ದರು.
ಗಾವಂಕೇರಿಯಿoದ ರಾಮನಾಥ ದೇವಸ್ಥಾನ ಕಡೆ ಹೋಗುತ್ತಿದ್ದ ಸ್ಕೂಟಿಯನ್ನು ಪರಶುರಾಮ್ ಏಕಾಏಕಿ ನಡುರಸ್ತೆಯಲ್ಲಿ ನಿಲ್ಲಿಸಿದ್ದು, ಇದರಿಂದ ಹಿಂದಿದ್ದ ಕಾರು ಅವರಿಗೆ ಗುದ್ದುವ ಅಪಾಯ ತಪ್ಪಿಸುವ ಅವಸರದಲ್ಲಿ ತಸ್ಲಿಂ ಅಲಿ ಅವರ ಕಾರು ಡಿವೈಡರ್’ಗೆ ಗುದ್ದಿದೆ.

ಅಪಘಾತದದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..

Leave a comment

Leave a Reply

You cannot copy content of this page