6 Skip to content

`ಸುಳ್ಳು ಸುದ್ದಿ ಹರಡಿದರೆ ಅಡ್ಮಿನ್ ಹೊಣೆ’

`ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಆ ತಾಣದ ಅಡ್ಮಿನ್ ವಿರುದ್ಧವೂ ಕ್ರಮ ಅನಿವಾರ್ಯ’ ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಎಚ್ಚರಿಸಿದ್ದಾರೆ.
`ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ನಿಗಾ ಇರಿಸಿದೆ. ವಯಕ್ತಿಕ ತೇಜೋವಧೆ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಅಡ್ಮಿನ್ ವಿರುದ್ಧ ಸಹ ಪ್ರಕರಣ ದಾಖಲಿಸಲಾಗುತ್ತದೆ’ ಎಂದವರು ಹೇಳಿದ್ದಾರೆ. ಜಿಲ್ಲೆಗೆ ಆಗಮಿಸಿದ ನಾಲ್ಕು ದಿನದಲ್ಲಿ ವಿವಿಧ ಕಡೆ ಸಂಚಾರ ನಡೆಸಿದ ಅವರು ಜುಲೈ 11ರಂದು ಭಟ್ಕಳದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. `ಶಾಂತಿ ಸೌಹಾರ್ದತೆ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಕ್ರಮ ಚಟುವಟಿಕೆಗಳಲ್ಲಿ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರೂ ಕ್ಷಮಿಸುವುದಿಲ್ಲ’ ಎಂದವರು ಎಚ್ಚರಿಸಿದ್ದಾರೆ.

Leave a comment

Leave a Reply

You cannot copy content of this page