ದೋಣಿ ರಕ್ಷಿಸಲು ಹೋದವ ನೀರುಪಾಲು!
ಅಂಕೋಲಾ: ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ದೋಣಿ ರಕ್ಷಿಸಲು ಹೋದ ಮೊಗಟಾ ಹೊಸನಗರದ ಸುಕ್ರು ಗಣಪತಿ ಅಂಬಿಗ (67) ದೋಣಿಸಹಿತ ನೀರು ಪಾಲಾಗಿದ್ದಾರೆ. ಅವರ ಶವ ಮೊಗಟಾದ ಮಂಜುನಾಥ ಗಣಪತಿ ನಾಯಕ ಅವರ ತೋಟದಲ್ಲಿ ದೊರೆತಿದೆ.
ಪಾತೆ ದೋಣಿಯಲ್ಲಿ ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದ ಸುಕ್ರು ಜುಲೈ 18ರಂದು ಗಂಗಾವಳಿ ನದಿ ತೀರದಲ್ಲಿ ಅವರು ದೋಣಿ ನಿಲ್ಲಿಸಿದ್ದರು. ಮಧ್ಯಾಹ್ನ ನದಿ ನೀರು ಏರಿರುವುದನ್ನು ನೋಡಿ ದೋಣಿಯನ್ನು ಸುರಕ್ಷಿತ ಸ್ಥಳಕ್ಕೆ ತರಲು ಹೋಗಿದ್ದರು. ಆದರೆ, ದೋಣಿ ತರುವ ಬರದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ದೋಣಿಸಹಿತ ಅವರು ಕಣ್ಮರೆಯಾದರು. ಆಗ ಎಷ್ಟು ಹುಡುಕಿದರೂ ಸುಕ್ರು ಹಾಗೂ ದೋಣಿಯ ಸುಳಿವು ಸಿಕ್ಕಿರಲಿಲ್ಲ. ಜುಲೈ 19ರಂದು ಮೊಗಟಾದ ಮಂಜುನಾಥ ಗಣಪತಿ ನಾಯಕ ಅವರ ತೋಟದಲ್ಲಿ ಶವ ಸಿಕ್ಕಿದೆ.
Discussion about this post