ಕಾರವಾರ: ಅಂಕೋಲಾ ತಾಲೂಕಿನ ಶಿರೂರು ದುರಂತಕ್ಕೆ ಐ ಆರ್ ಬಿ ಕಂಪನಿಯ ಅವೈಜ್ಞಾನಿಕ ಕೆಲಸ ಕಾರಣ. ಈ ಬಗ್ಗೆ ಮುಂಚಿತವಾಗಿ ತಿಳಿಸಿದರೂ ಜಿಲ್ಲಾಡಳಿತ ಕ್ರಮ ಜರುಗಿಸಿಲ್ಲ’ ಎಂದು ಜಯಕರ್ನಾಟಕ ಜನಪರ ವೇದಿಕೆ ಆರೋಪಿಸಿದೆ.
`ಈ ಹಿಂದೆ ಸಾಕಷ್ಟು ಬಾರಿ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದೇವು. ಜುಲೈ 11ರಂದು ಸಹ ಜಿಲ್ಲಾಡಳಿತಕ್ಕೆ ಈ ಬಗ್ಗೆ ಎಚ್ಚರಿಸಿದ್ದೇವು. ಆದರೂ, ಸರ್ಕಾರ ಎಚ್ಚೆತ್ತುಕೊಂಡಿಲ್ಲ’ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಹೇಳಿದ್ದಾರೆ. `ಈ ದುರಂತದಲ್ಲಿ ಸಾವನಪ್ಪಿದವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಸಾಲದು. ಸರ್ಕಾರ ಆ ಮೊತ್ತವನ್ನು 10 ಲಕ್ಷ ರೂ’ಗೆ ಏರಿಸಬೇಕು. ಜೊತೆಗೆ ಗುತ್ತಿಗೆವಹಿಸಿಕೊಂಡ ಐ ಆರ್ ಬಿ ಕಂಪನಿ ತಲಾ 20 ಲಕ್ಷ ರೂ ಪರಿಹಾರ ನೀಡಬೇಕು’ ಎಂದವರು ಆಗ್ರಹಿಸಿದ್ದಾರೆ. ಈವರೆಗೆ ನಡೆದ ಎಲ್ಲಾ ದುರಂತಗಳನ್ನು ಗಂಭೀರವಾಗಿ ಪರಿಗಣಿಸಿ ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Discussion about this post