ಕುಮಟಾದ ತಿಗಣೇಶ ಮಾಗೋಡು ಕಳೆದ 7 ವರ್ಷಗಳಿಂದ 35 ರೂಪಾಯಿಗೆ `ಸಾತ್ವಿಕ ಹವ್ಯಕ ಊಟ’ ಬಡಿಸುತ್ತಿದ್ದಾರೆ. ಅವರು ಬಡಿಸುವ ಊಟ ಎಷ್ಟು ಸಾತ್ವಿಕ ಎಂದರೆ ಎಲ್ಲಿಯೂ ಅವರು ಈರುಳ್ಳಿ-ಬೆಳ್ಳುಳ್ಳಿ ಬಳಸುವುದಿಲ್ಲ!
ರಾಮಮಂದಿರದ ವಿಶೇಷ ದಿನಗಳಲ್ಲಿ 500ಕ್ಕೂ ಅಧಿಕ ಮಂದಿಗೆ ಉಚಿತವಾಗಿ ಅವರು ಅನ್ನದಾನ ಮಾಡಿದ್ದಾರೆ. `ನಮ್ಮನೆ ಭಟ್ಟರ ಹೋಟೆಲ್’ನಲ್ಲಿ ಬಡಿಸುವ ಅನ್ನ, ಸಾರು, ರಸಂ, ಪಲ್ಯ, ತಂಬಳಿ ಊಟಕ್ಕೆ ವಿದೇಶಿಗರು ಮನ ಸೋತಿದ್ದಾರೆ. 35 ರೂಪಾಯಿಯ ಊಟದಲ್ಲಿ ಶನಿವಾರ ಹಾಗೂ ಸೋಮವಾರ ಸಿಹಿ ವಿತರಿಸಿದ್ದಾರೆ. ಕವಿ, ಸಾಹಿತಿಯೂ ಆಗಿರುವ ಅವರು ಊಟಕ್ಕೆ ಬರುವವರಿಗೆ ಹೊಟೆತುಂಬಾ ಊಟದ ಜೊತೆ ಮನರಂಜನೆಯನ್ನು ಒದಗಿಸುತ್ತಾರೆ.
ಬೆಳಗ್ಗಿನ ಅವಧಿಯಲ್ಲಿ ಬಗೆ ಬಗೆಯ ತಿಂಡಿಗಳನ್ನು ಅವರು ತಯಾರಿಸುತ್ತಾರೆ. ಇಡ್ಲಿ-ವಡಾ, ಬನ್ಸ್-ಪುರಿ, ಪಲಾವ್-ಚಪಾತಿ ಜೊತೆ `ನಮ್ಮನೆ ಪುರಿ’ ಎಂಬ ವಿಶೇಷ ಖಾದ್ಯ ಇಲ್ಲಿ ಸಿಗುತ್ತದೆ. ಊಟಕ್ಕೆ ಸ್ಥಳೀಯ ಗೋಕರ್ಣ ಉಪ್ಪು ಬಡಿಸುವ ಅವರು ಉಪ್ಪಿನಕಾಯಿಯನ್ನು ಸಹ ಮನೆಯಲ್ಲಿಯೇ ತಯಾರಿಸಿ ಉಣಬಡಿಸುತ್ತಾರೆ. ಕುಮಟಾ ಪಟ್ಟಣದಿಂದ ಹೊನ್ನಾವರ ಕಡೆ ಸಾಗುವಾಗ 4ಕಿಮೀ ದೂರದಲ್ಲಿ ಹೆದ್ದಾರಿ ಅಂಚಿನಲ್ಲಿಯೇ `ನಮ್ಮನೆ ಭಟ್ಟರ ಹೋಟೆಲ್’ ಕಾಣುತ್ತದೆ.
ಒಟ್ಟಿಗೆ ಹತ್ತಾರು ಜನ ಊಟಕ್ಕೆ ಬರುವುದಿದ್ದರೆ ಮುಂಚಿತವಾಗಿ ಫೋನ್ ಮಾಡಿ ಪರಿಚಯ ಹೇಳಿದರೆ ಅವರಿಗೂ ಅನುಕೂಲ
ತಿಗಣೇಶ ಮಾಗೋಡು – : 9343596619
Discussion about this post