ಯಲ್ಲಾಪುರ: `ಅವ್ಯವಸ್ಥೆಯ ಆಗರವಾಗಿರುವ ಕಿರವತ್ತಿಯ ರುದ್ರಭೂಮಿಗೆ ಅಗತ್ಯ ಸೌಕರ್ಯ ಒದಗಿಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ.
`ಕಿರವತ್ತಿ ಹಿಂದೂ ರುದ್ರಭೂಮಿಯಲ್ಲಿ ನೀರಿನ ಸೌಕರ್ಯವಿಲ್ಲ’ ಎಂದು ಬಿಜೆಪಿ ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೋಮೇಶ್ವರ ನಾಯ್ಕ ದೂರಿದರು. `ಈ ಮಾರ್ಗದಲ್ಲಿ ವಿದ್ಯುತ್ ಸರಬರಾಜು ಆಗಿಲ್ಲ’ ಎಂದು ಬಿಜೆಪಿ ಯುವಮೋರ್ಚಾ ಮಂಡಳದ ಅಧ್ಯಕ್ಷರಾದ ರಜತ್ ಬದ್ದಿ ಆರೋಪಿಸಿದರು. `ಇಲ್ಲಿ ಸಂಚರಿಸುವ ರಸ್ತೆ ಸಹ ಸರಿಯಿಲ್ಲ’ ಎಂದು ಬಿಜೆಪಿ ಯುವಮೋರ್ಚಾ ಮಂಡಳ ಪ್ರಧಾನ ಕಾರ್ಯದರ್ಶಿ ಪ್ರಭು ಚಿಂಚಕAಡಿ ಆಕ್ರೋಶ ವ್ಯಕ್ತಪಡಿಸಿದರು. `ಸಾವಿನ ನೋವಿನಲ್ಲಿದ್ದವರು ಇದೆಲ್ಲವನ್ನು ಅನುಭವಿಸಿ ರುದ್ರಭೂಮಿಗೆ ತೆರಳುತ್ತಿದ್ದು, ಸಾಮಾಜಿಕ ಕಳಕಳಿಯ ಮನವಿಯನ್ನು ಸರ್ಕಾರ ಈಡೇರಿಸಬೇಕು’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಆಗ್ರಹಿಸಿದರು.
ಪ್ರಮುಖರಾದ ಬಾಪು ತಾಟೆ, ಗಾಂಧೀ ಸೋಮಾಪುರಕರ, ಅರ್ಜುನ್ ಬೆಂಗೇರಿ, ವಿಠ್ಠಲ ಪಟಕಾರೆ, ಸುಭಾಷ ಶೇಷಗಿರಿ, ಪರಶುರಾಮ ಮಂಗಲಿ, ವಿಶಾಲ ಸುನಾರ್, ಸೋನು ಜಂಗ್ಲೆ, ಕೇಶವ ಕಾಂಬ್ಳೆ, ಅಶೋಕ ದಿಬ್ಬದಮನಿ,ಪರಶುರಾಮ ತಿರಕಪ್ಪನವರ, ದೇವರಾಜ, ಉದಯ, ಅಜಯ ಶಿಂದೆ ಇತರರು ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Discussion about this post