ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೆ ಶಿರೂರು ದುರಂತದ ಬಗ್ಗೆ ವರದಿ ಸಲ್ಲಿಸುವುದಕ್ಕಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಶನಿವಾರ ಶಿರೂರಿಗೆ ಆಗಮಿಸುತ್ತಿದ್ದಾರೆ. ಆದರೆ, ಅನಿವಾರ್ಯ ಕಾರಣದಿಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಸಚಿವರ ಪ್ರವಾಸದಲ್ಲಿ ಭಾಗಿಯಾಗುತ್ತಿಲ್ಲ.
ಬೆಂಗಳೂರಿನಿAದ ಹುಬ್ಬಳ್ಳಿಗೆ ಬರುವ ಕುಮಾರಸ್ವಾಮಿ ನಂತರ ಅಲ್ಲಿಂದ ಅಂಕೋಲಾದ ಶಿರೂರಿಗೆ ಬರಲಿದ್ದಾರೆ. ಉಳುವರೆ ಗ್ರಾಮದಲ್ಲಿ ಸಂಚಾರ ನಡೆಸಿ, ನಂತರ ಗೋವಾಗೆ ತೆರಳಲಿದ್ದಾರೆ. ಅಲ್ಲಿಂದ ವಿಮಾನದ ಮೂಲಕ ನೇರವಾಗಿ ದೆಹಲಿಗೆ ಹೋಗಿ ವರದಿ ನೀಡಲಿದ್ದಾರೆ.
`ನಾನು ಎಚ್ ಡಿ ಕುಮಾರಸ್ವಾಮಿ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅನಿವಾರ್ಯ ಕಾರಣದಿಂದ ಶಿರೂರಿಗೆ ಬರಲು ಆಗುತ್ತಿಲ್ಲ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. `ದುರಂತ ನಡೆದ ದಿನದಿಂದಲೂ ಅಲ್ಲಿನ ಪರಿಸ್ಥಿತಿಯ ಬಗ್ಗೆ ಕುಮಾರಸ್ವಾಮಿ ಅವರಿಗೆ ತಿಳಿಸುತ್ತಿದ್ದೇನೆ. ರಕ್ಷಣಾ ಕಾರ್ಯದ ಬಗ್ಗೆಯೂ ಸೂಚಿಸಿದ್ದೆ. ಅಗತ್ಯ ಪರಿಹಾರ ಕಾರ್ಯಕ್ಕೆ ನಾನು ನೆರವು ನೀಡುವೆ’ ಎಂದು ಕಾಗೇರಿ ಹೇಳಿದ್ದಾರೆ.




Discussion about this post