6 Skip to content

ಪುನೀತರ ಆರಾಧಕರಾಗಿದ್ದ ಶಿರೂರು ಚಾಯ್‌ವಾಲ: ಮಣ್ಣಿನಲ್ಲಿ ಹೂತುಹೋದ ಕಲಾದೇವರ ಚಿತ್ರ…

ಶಿರೂರಿನ ಚಹಾ ಅಂಗಡಿ ಮೇಲ್ಬಾಗ ಇದ್ದ ನಟ ಪುನಿತರಾಜಕುಮಾರ ಅವರ ಫೋಟೋ

ಶಿರೂರು ಗುಡ್ಡದ ತಳಭಾಗದಲ್ಲಿ ಚಹದ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ನಟ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಹೀಗಾಗಿಯೇ ಅವರು ತನ್ನ ಚಹಾ ಅಂಗಡಿ ಮೇಲ್ಬಾಗ ಪುನಿತರಾಜಕುಮಾರ ಅವರು ಫೋಟೋವನ್ನು ಹಾಕಿಕೊಂಡಿದ್ದರು. ಲಕ್ಷ್ಮಣ ನಾಯ್ಕ ಅವರ ಕುಟುಂಬದ ಎಲ್ಲರೂ ಪುನಿತರಾಜಕುಮಾರ್ ಅವರ ಅಭಿಮಾನಿಯಾಗಿದ್ದು, ಅವರು ನಡೆಸಿಕೊಡುವ ರಿಯಾಲಿಟಿ ಶೋ’ವನ್ನು ಎಂದಿಗೂ ತಪ್ಪಿಸುತ್ತಿರಲಿಲ್ಲ. ಪ್ರಸ್ತುತ ಗುಡ್ಡ ಕುಸಿತದಿಂದ ಲಕ್ಷ್ಮಣ ನಾಯ್ಕ ಅವರ ಇಡೀ ಕುಟುಂಬ ನಾಶವಾಗಿದ್ದು, ಚಹಾದ ಅಂಗಡಿ ಜೊತೆ ಪುನಿತರಾಜಕುಮಾರ ಅವರ ಭಾವಚಿತ್ರವೂ ಮಣ್ಣಿನಡಿ ಹೂತುಹೋಗಿದೆ.
ಲಕ್ಷ್ಮಣ ನಾಯ್ಕ ಅವರ ಚಹದ ಅಂಗಡಿಗೆ ಹೋದರೆ ಅಲ್ಲಿ ಸದಾ ನಗುಮುಖದ ಸ್ವಾಗತ ಸಿಗುತ್ತಿತ್ತು. ಪುನಿತರಾಜಕುಮಾರ್ ಧ್ವನಿಯ ಗೀತೆಗಳು ಅಲ್ಲಿ ಯಾವಾಗಲೂ ಕೇಳಿಬರುತ್ತಿತ್ತು. ಅಲ್ಲಿಯೇ ಇದ್ದ ಆಸನಗಳಲ್ಲಿ ಕುಳಿತು ಚಹ ಹೀರುವ ಹೆದ್ದಾರಿ ಪ್ರಯಾಣಿಕರು ಪುನಿತರಾಜಕುಮಾರ ಅವರ ಗೀತೆಗಳನ್ನು ಕೇಳಿ ಆಹ್ವಾದಿಸುತ್ತಿದ್ದರು. ಇಲ್ಲಿನ ಕುರುಕಲು ತಿಂಡಿ ಹಾಗೂ ಚಹಾ ಸೇವನೆಗಾಗಿಯೇ ಬರುವ ಕೆಲ ಖಾಯಂ ಗಿರಾಕಿಗಳಿದ್ದರು. ಅನೇಕ ಲಾರಿ ಚಾಲಕರಿಗೆ ಈ ಅಂಗಡಿ ವಿಶ್ರಾಂತಿಯ ತಾಣವಾಗಿತ್ತು. ಎಷ್ಟೇ ಜನ ಬಂದರೂ ನಾಯ್ಕ ಕಿಂಚಿತ್ತೂ ಬೇಸರಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿಯೇ ಅಲ್ಲಿನ ಹೆದ್ದಾರಿ ಪಕ್ಕ ಸದಾ ಒಂದಷ್ಟು ಲಾರಿಗಳು ನಿಂತಿರುತ್ತಿದ್ದವು.  ತಮ್ಮ ಹಳೆಯದಾದ ಚಹ ಅಂಗಡಿಯನ್ನು ನವಿಕರಿಸುವಾಗ ಸಹ ಪುನಿತರಾಜಕುಮಾರ ಅವರ ಭಾವಚಿತ್ರವನ್ನು ಅವರು ಜೋಪಾನವಾಗಿ ಎತ್ತಿಟ್ಟಿದ್ದರು. ಚಹದ ಅಂಗಡಿ ಪ್ರವೇಶಿಸುತ್ತಲೇ ಆ ಫೋಟೋ ದರ್ಶನವಾಗುವಂತೆ ನೋಡಿಕೊಂಡಿದ್ದರು. ನವೀಕರಣ ಪೂರ್ತಿಯಾದ ಮೇಲೆ ಇನ್ನಷ್ಟು ಅಚ್ಚುಕಟ್ಟಾಗಿ ಅದನ್ನು ಅಂಗಡಿ ಮೇಲ್ಬಾಗದಲ್ಲಿರಿಸುವ ವಿಚಾರ ಮಾಡಿದ್ದರು.
ಶಿರೂರು ಹಾಗೂ ಚಹಾದ ಅಂಗಡಿ ಮೊದಲು ಹೇಗಿತ್ತು? ಗೂಗಲ್ ಸೆರೆಹಿಡಿದ 360ಡಿಗ್ರಿ ವಿಡಿಯೋ ಇಲ್ಲಿ ನೋಡಿ…

Leave a comment

Leave a Reply

You cannot copy content of this page