6 Skip to content

ಗಂಗೆಯ ಒಡಲಿನಲ್ಲಿ ಸಿಕ್ಕಿದ್ದು ಬರೀ ಮಣ್ಣು!

ಶಿರೂರು ಗುಡ್ಡ ಕುಸಿತದ ಪರಿಣಾಮ ಗಂಗಾವಳಿ ನದಿ ಆಳದಲ್ಲಿ ಬಾರೀ ಪ್ರಮಾಣದ ಮಣ್ಣು ತುಂಬಿಕೊoಡಿದೆ. ನೀರು ಸರಾಗವಾಗಿ ಹರಿದುಹೋಗಲು ಅಡಚಣೆಯಾಗಿದ್ದು, ಈ ರಾಡಿ ಮಿಶ್ರಿತ ಹೂಳು ತೆಗೆಯುವುದು ಇದೀಗ ಸವಾಲಾಗಿದೆ.
ರಸ್ತೆಯಲ್ಲಿ ಬಿದ್ದ ಗುಡ್ಡಕ್ಕಿಂತಲೂ ದೊಡ್ಡ ಪ್ರಮಾಣದ ಮಣ್ಣು ಗಂಗಾವಳಿ ನದಿಗೆ ಸೇರಿದೆ. ಸಾಕಷ್ಟು ಮರ-ಗಿಡಗಳು ಸಹ ನದಿಯಲ್ಲಿ ಸಿಲುಕಿಕೊಂಡಿದ್ದು, ಅವು ಹಾಗೇ ಇದ್ದರೆ ಇನ್ನಷ್ಟು ಅಪಾಯ ಆಹ್ವಾನಿಸಲಿದೆ. ಸ್ಥಳದಲ್ಲಿ ಬೀಡುಬಿಟ್ಟಿರುವ ಮುಳುಗು ತಜ್ಞರಿಗೆ ಸಹ ಗಂಗಾವಳಿ ಆಳದಲ್ಲಿ ಮಣ್ಣನ್ನು ಹೊರತುಪಡಿಸಿ ಬೇರೆನೂ ಕಾಣುತ್ತಿಲ್ಲ. ಆ ಮಣ್ಣಿನ ಅಡಿ ಲಾರಿ ಸಿಲುಕಿದ ಅನುಮಾನಗಳಿದ್ದು, ಅದನ್ನು ಪತ್ತೆ ಮಾಡುವುದು ಸಾಹಸವಾಗಿದೆ.
ಇನ್ನೂ ಮಳೆ ಕಡಿಮೆ ಇರುವ ಕಾರಣ ಶಿರೂರಿನ ರಕ್ಷಣಾ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ. ಬುಧವಾರ ಅತ್ಯಾಧುನಿಕ ಪ್ಲೊಕೆನ್ ಯಂತ್ರವನ್ನು ಜಿಲ್ಲಾಡಳಿತ ಕರೆಯಿಸಿದೆ. ಆ ಯಂತ್ರದ ಮೂಲಕ ಮೂಲಕ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ. ಈ ಯಂತ್ರ ನದಿ ಆಳದಲ್ಲಿನ ಮಣ್ಣನ್ನು ತೆಗೆಯಲು ಸಹಕಾರಿಯಾಗಲಿದೆ. ಮುಳುಗು ತಜ್ಞರು ನಿರಂತರವಾಗಿ ಗಂಗಾವಳಿ ನದಿ ಆಳದಲ್ಲಿ ಹುದುಗಿರಬಹುದಾದ ಅವಶೇಷಗಳ ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೆ ಗುಡ್ಡದಿಂದ ಕುಸಿದ ಮಣ್ಣನ್ನು ಬಿಟ್ಟು ಬೇರೆ ಏನೂ ಪತ್ತೆಯಾಗಿಲ್ಲ.
ಗಂಗಾವಳಿ ನದಿಯಲ್ಲಿ ಬುಧವಾರ ನಡೆದ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ…

Leave a comment

Leave a Reply

You cannot copy content of this page