6 Skip to content

ಮಾನವನ ಸಾವಿಗೆ ಕಾರಣ ಆ ಹುಣಸೆ ಮರ!

ಯಲ್ಲಾಪುರ: ಮಂಚಿಕೇರಿ ಬಳಿಯ ಮಾಳನಕೊಪ್ಪ ಶಾಲೆ ಬಳಿ ಮರಬಿದ್ದ ಪರಿಣಾಮ ವಿನಯ ಮಂಜುನಾಥ ಗಾಡಿಗ (29) ಎಂಬಾತರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಜುಲೈ 24ರ ಬೆಳಗ್ಗೆ 9 ಗಂಟೆ ವೇಳೆಗೆ ಅವರು ಸ್ಕೂಟಿಯಲ್ಲಿ ಮನೆಯಿಂದ ಹೊರಟಿದ್ದರು. ಆಗ ಬೀಸಿದ ರಭಸ ಗಾಳಿಗೆ ರಸ್ತೆ ಮೇಲೆ ಮರ ಬಿದ್ದಿದ್ದು, ಅದರ ಅಡಿ ಸಿಲುಕಿದ ಆಲವಾಡದ ಕಬ್ಬಿನಗದ್ದೆಯ ವಿನಯ ಗಾಡಿಗ ಕೊನೆಉಸಿರೆಳೆದರು. ಮರಗಳ ನಡುವೆ ಸಿಲುಕಿದ್ದ ದೇಹವನ್ನು ಸ್ಥಳೀಯರು ಹೊರತೆಗೆದರು.
ಬೆಳಗ್ಗೆ ಬೀಸಿದ ಗಾಳಿಗೆ ಅಲ್ಲಲ್ಲಿ ಕಡೆ ಹಾನಿ ಉಂಟಾಗಿದೆ. ಮಂಚಿಕೇರಿ ದೇವಾಲಯ ದುರ್ಗಾಪರಮೇಶ್ವರಿ ದೇವಾಲಯದ ಮೇಲೆಯೂ ಪಕ್ಕದ ಮನೆಯವರ ಚಾವಣಿ ಹಾರಿಬಿದ್ದಿದೆ.
ಬಿದ್ದ ಮರ ತೆರವು ಮಾಡಿದ ವಿಡಿಯೋ ಇಲ್ಲಿ ನೋಡಿ..

Leave a comment

Leave a Reply

You cannot copy content of this page