6 Skip to content

ಮಳೆ ನೀರಿಗೆ ನೆನದ ಮೊಗವಳ್ಳಿ

ಶಿರಸಿ: ವರದಾ ನದಿ ಉಕ್ಕಿ ಹರಿದ ಪರಿಣಾಮ ಮೊಗವಳ್ಳಿ ಗ್ರಾಮ ಸಂಪೂರ್ಣವಾಗಿ ನಲುಗಿದ್ದು, ಕೃಷಿ-ಕೂಲಿ ಮಾಡಿ ಬದುಕುಕಟ್ಟಿಕೊಂಡಿದ್ದ ಇಲ್ಲಿನ ಜನ ಅತಂತ್ರರಾಗಿದ್ದಾರೆ. ತೋಟ-ಗದ್ದೆಗಳಿಗೂ ನೀರು ನುಗ್ಗಿದ್ದರಿಂದ ಅಲ್ಲಿನ ಬೆಳೆ ಜವಳು ಕಾರುತ್ತಿದೆ. ಮನೆ ಅಂಗಳದವರೆಗೆ ನೀರು ನಿಂತಿರುವುದರಿoದ ಅಲ್ಲಿನವರಿಗೆ ಏನು ಮಾಡಬೇಕು? ಎಂದು ಸಹ ತೋಚುತ್ತಿಲ್ಲ.
ಈ ಬಗ್ಗೆ ಶಿರಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ದೂರು ಸ್ವೀಕರಿಸಿದ್ದು, ಅವರ ಸೂಚನೆ ಪ್ರಕಾರ ಜು 23ರ ಮಧ್ಯಾಹ್ನ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಅಲ್ಲಿಗೆ ತೆರಳಿ ಜನರ ಸಮಸ್ಯೆ ಆಲಿಸಿದರು. ನೆರೆ ಸಮಸ್ಯೆಯನ್ನು ಅವಲೋಕಿಸಿದ ಬಿಜೆಪಿ ಪ್ರಮುಖರಾದ ಎಲ್ ಟಿ ಪಾಟೀಲ್, ಉಮೇಶ್ ಭಾಗ್ವತ, ಉಷಾ ಹೆಗಡೆ, ಮಂಜುನಾಥ್ ಪಾಟೀಲ್, ಪ್ರೇಮ್ ಕುಮಾರ್, ಅರವಿಂದ ಶೆಟ್ಟಿ ಅವರ ನಿಯೋಗ ಅಲ್ಲಿನ ಸ್ಥಿತಿ-ಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. `ಸಂಸತ್ ಅಧಿವೇಶನ ಮುಗಿದ ನಂತರ ಕಾಗೇರಿ ಅವರು ನೇರವಾಗಿ ಇಲ್ಲಿಗೆ ಬರಲಿದ್ದು, ಸಮಸ್ಯೆ ಹೋಗಲಾಡಿಸಲು ಶಾಶ್ವತ ಚಿಂತನೆ ನಡೆಸಲಿದ್ದಾರೆ’ ಎಂದು ಅಲ್ಲಿನವರಿಗೆ ಧೈರ್ಯ ಹೇಳಿದರು. ಕಾಂಗ್ರೆಸ್ಸಿನಿoದ ಬಿಜೆಪಿಗೆ ಮರಳಿದ ರಾಘು ಭಟ್ಟ ಹಾಸಣಗಿ ಮಾತನಾಡಿ `ರಾಜ್ಯ ಸರ್ಕಾರ ಹಾನಿ ಪರೀಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು. ಮಂಜುನಾಥ ನಾಯ್ಕ, ಗಣೇಶ ಸಣ್ಣಲಿಂಗಣ್ಣನವರ್, ವಿಶ್ವನಾಥ್ ಹಾದಿಮನಿ ಇತರರು ಜೊತೆಗಿದ್ದರು.

ಮೊಗವಳ್ಳಿ ಪರಿಸ್ಥಿತಿಯ ವಿಡಿಯೋ ಇಲ್ಲಿ ನೋಡಿ..

Leave a comment

Leave a Reply

You cannot copy content of this page