6 Skip to content

ಸಂತ್ರಸ್ತರನ್ನು ಸಂತೈಸಿದ ಶ್ರೀಗಳು

ಅಂಕೋಲಾ: ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದ ದುರಂತದಲ್ಲಿ ಸಾವನಪ್ಪಿದವರ ಮನೆಗೆ ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ತೆರಳಿ ಅವರ ಸಂಬoಧಿಕರಿಗೆ ಸಾಂತ್ವಾನ ಹೇಳಿದ್ದಾರೆ.
ದುರಂತದಲ್ಲಿ ನದಿ ಪಾಲಾಗಿರುವ ಜಗನ್ನಾಥ ನಾಯ್ಕ ಅವರ ಮನೆಗೆ ಭೇಟಿ ನೀಡಿದ ಶ್ರೀಗಳು ಜಗನ್ನಾಥ ಅವರ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿದರು. ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಕುಟುಂಬದ ಲಕ್ಷö್ಮಣ ನಾಯ್ಕ ಅವರ ಪತ್ನಿ ಶಾಂತಿ ನಾಯ್ಕ ಅವರ ತವರು ಮನೆ ಗಂಗಾವಳಿಗೆ ತೆರಳಿ ಅಲ್ಲಿದ್ದ ಶಾಂತಿ ಅವರ ತಾಯಿ ತಾರಾ ಹಾಗೂ ತಂದೆ ಪಾಂಡುರoಗ ನಾಯ್ಕ ಅವರಿಗೆ ಸಾಂತ್ವಾನ ಹೇಳಿದರು. ಹಾಗೇ ಇದೇ ದುರಂತದಲ್ಲಿ ನಾಪತ್ತೆಯಾಗಿರುವ ಗಂಗೆಕೊಳ್ಳದ ಮಾದೇವಿ ವಿಷ್ಣು ನಾಯ್ಕ ಅವರ ಮನೆಗೆ ತೆರಳಿ ಅಲ್ಲಿದ್ದವರನ್ನು ಮಾತನಾಡಿಸಿದರು.

Leave a comment

Leave a Reply

You cannot copy content of this page