6 Skip to content

ಯಲ್ಲಾಪುರಕ್ಕೂ ಬಂದಿದ್ದ ಅರ್ಜುನನ ಲಾರಿ!

ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾದ ಕೇರಳದ ಅರ್ಜುನನ ಲಾರಿ ಆಗಾಗ ಯಲ್ಲಾಪುರಕ್ಕೆ ಆಗಮಿಸುತ್ತಿತ್ತು. ದಾಂಡೇಲಿ ಹಾಗೂ ಯಲ್ಲಾಪುರದ ಕಿರವತ್ತಿಗೆ ಬಂದು ಆತ ಮರದ ನಾಟಾಗಳನ್ನು ಕೊಂಡೊಯ್ಯುತ್ತಿದ್ದ. ಹೀಗೆ ಜಿಲ್ಲೆಗೆ ಬಂದ ಆತ ಶಿರೂರು ಚಹಾ ಅಂಗಡಿಯಲ್ಲಿ ವಿಹರಿಸುವುದನ್ನು ರೂಡಿಸಿಕೊಂಡಿದ್ದ.
ಅರ್ಜುನ್ ತನ್ನ ಲಾರಿ ಜೊತೆ ಕಳೆದ ತಿಂಗಳು ಸಹ ಕಿರವತ್ತಿಗೆ ಬಂದಿದ್ದ. ಆಗ, ನಾಟಾ ತುಂಬಿದ ಲಾರಿ ಕೆಸರಿನಲ್ಲಿ ಸಿಲುಕಿದ್ದು, ಸ್ವತಃ ಅರ್ಜುನನೇ ಚಾಣಾಕ್ಷತನದಿಂದ ಲಾರಿಯನ್ನು ಮೇಲೆಬ್ಬಿಸಿ ಕೊಂಡೊಯ್ದಿದ್ದ. ಜೆಸಿಬಿ ಚಾಲಕನಿಗೆ ವಿವಿಧ ಸೂಚನೆ ನೀಡಿ, ಲಾರಿಯನ್ನು ಉಪಾಯವಾಗಿ ಕೆಸರಿನಿಂದ ಹೊರ ತಂದು ಸಾಗಿದ್ದ.
ಜು 15ರಂದು ಸಹ ಅರ್ಜುನ್ ಲಾರಿಯಲ್ಲಿ ಮರದ ನಾಟಾ ತುಂಬಿಸಿಕೊoಡು ಸಂಜೆ 4.30ರ ವೇಳೆಗೆ ರಾಮನಗರದಿಂದ ಕೇರಳಕ್ಕೆ ಹೊರಟಿದ್ದು, ಹಳಿಯಾಳ ಮಾರ್ಗವಾಗಿ ಯಲ್ಲಾಪುರಕ್ಕೆ ಬಂದಿದ್ದ. ಯಲ್ಲಾಪುರದಲ್ಲಿ ಆತ ಅತ್ಯಂತ ನಿಧಾನವಾಗಿ ಲಾರಿ ಚಲಾಯಿಸಿದ್ದರ ವಿಡಿಯೋ ಇದೀಗ ಎಲ್ಲಡೆ ಹರಿದಾಡುತ್ತಿದೆ. ಜೊತೆಗೆ ಆತ ಅಂಕೋಲಾ ತಲುಪಿರುವ ವಿಡಿಯೋ ಸಹ ಅಲ್ಲಿನ ಪೆಟ್ರೊಲ್ ಬಂಕ್’ನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Leave a comment

Leave a Reply

You cannot copy content of this page