6 Skip to content

ಗಂಗಾವಳಿ: ಬಾನೆತ್ತರದಲ್ಲಿ ಹೆಲಿಕಾಪ್ಟರ್ – ನದಿ ಅಂಚಿನಲ್ಲಿ ಡ್ರೋಣ್ ಹಾರಾಟ!

ಶಿರೂರುನಲ್ಲಿ ಹರಿದಿರುವ ಗಂಗಾವಳಿ ನದಿ ತಳಭಾಗದಲ್ಲಿ ಅರ್ಜುನ ಸಂಚರಿಸುತ್ತಿದ್ದ ಲಾರಿ ಪತ್ತೆಯಾಗಿದ್ದು, ಅದನ್ನು ಮೇಲೆತ್ತಲು ಎಲ್ಲಾ ರೀತಿಯ ಪ್ರಯತ್ನ ಮುಂದುವರೆದಿದೆ. ಮಿಲಟರಿ ಪಡೆಯವರು ಲಾರಿ ಮೇಲೆತ್ತಲು ಶ್ರಮಿಸುತ್ತಿದ್ದಾರೆ.
ಗಂಗಾವಳಿ ನದಿ ಮೇಲ್ಬಾಗದಲ್ಲಿ ನೇವಿ ಹಾಗೂ ಮಿಲಟರಿ ಪಡೆಯವರು ಹೆಲಿಕಾಪ್ಟರ್ ಹಾರಿಸಿ ಅದರ ಮೂಲಕ ಪರಿಶೀಲನೆ ನಡೆಸಿದ್ದಾರೆ. ನದಿ ಅಂಚಿನ ಪ್ರದೇಶಗಳಲ್ಲಿ ಡ್ರೋಣ್ ಹಾರಿಸಿ ಸ್ಥಿತಿ-ಗತಿ ಅಧ್ಯಯನ ನಡೆದಿದೆ. ಸ್ಥಳದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದು, ಗುರುವಾರ ಪತ್ರಕರ್ತರಿಗೆ ಸಹ ತೆರಳಲು ಅವಕಾಶ ನೀಡಿಲ್ಲ. ಮೊಬೈಲ್ ಸಿಗ್ನಲ್’ನಿಂದ ಕಾರ್ಯಾಚರಣೆಗೆ ಅಡ್ಡಿ ಆಗುವ ಆತಂಕದ ಹಿನ್ನಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ನದಿ ಆಳದಲ್ಲಿ ಮಣ್ಣಿನ ರಾಡಿಯಲ್ಲಿ ಸಿಲುಕಿರುವ ಲಾರಿ ಮೇಲೆತ್ತುವುದು ರಕ್ಷಣಾ ತಂಡದವರಿಗೂ ಸವಾಲಾಗಿದೆ. ನದಿ ನೀರು ಕೆಂಪಾಗಿರುವುದರಿoದ ಮುಳುಗು ತಜ್ಞರು ಸಮಸ್ಯೆ ಅನುಭವಿಸುತ್ತಿದ್ದಾರೆ. 600ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಡ್ರೋಣ್ ಹಾಗೂ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಮುಂದುವರೆಸಿದ ವಿಡಿಯೋ ಇಲ್ಲಿ ನೋಡಿ..

 

Leave a comment

Leave a Reply

You cannot copy content of this page