ನೀರಾಡಲು ಹೋದವ ಶವವಾದ!
ಮುಂಡಗೋಡ: ಬುಧವಾರ ಧರ್ಮಾ ಜಲಾಶಯದಲ್ಲಿ ನೀರು ಪಾಲಾಗಿದ್ದ ಮುಡಸಾಲಿ ಗ್ರಾಮದ ಶ್ರೀನಾಥ ಹರಿಜನ ಸಾವನಪ್ಪಿದ್ದು, ಆತನ ಶವ ಗುರುವಾರ ಸಿಕ್ಕಿದೆ.
ಮಳಗಿ ಬಳಿಯ ಧರ್ಮಾ ಜಲಾಶಯಕ್ಕೆ ಸ್ನೇಹಿತನ ಜೊತೆ ತೆರಳಿದ್ದ ಶ್ರೀನಾಥ ಅಲ್ಲಿ ನೀರಿಗೆ ಇಳಿದಿದ್ದ. ನೀರಿನ ರಭಸಕ್ಕೆ ಆತ ಕೊಚ್ಚಿ ಹೋಗಿದ್ದು, ಆತನ ಸ್ನೇಹಿತನನ್ನು ಸ್ಥಳೀಯರು ರಕ್ಷಿಸಿದ್ದರು. ಬುಧವಾರ ಶ್ರೀನಾಥನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಗುರುವಾರ ಆತನ ಶವ ಅನತಿ ದೂರದಲ್ಲಿ ಪತ್ತೆಯಾಗಿದೆ.
