6
September 28, 2026

ಮೀನುಗಾರರ ನಡುವೆ ಮಾರಾಮಾರಿ!

ಕುಮಟಾ: ತೊರ್ಕೆ ಗ್ರಾ ಪಂ ವ್ಯಾಪ್ತಿಯ ಸಿದ್ದೇಶ್ವರ ಜಂತ್ರಾಡಿ ಪ್ರದೇಶ ಇದೀಗ ವಿವಾದದ ಕೇಂದ್ರವಾಗಿದ್ದು, ಮೀನು ಹಿಡಿಯುವ ವಿಷಯವಾಗಿ ಮೀನುಗಾರರ ನಡುವೆ ಪರಸ್ಪರ ವಾಗ್ವಾದ ನಡೆದು ಅದು ಹಾಗೂ ಕೈ ಕೈ ಮಿಲಾಯಿಸುವ ಹಂತದಲ್ಲಿ ಗಲಾಟೆ ನಡೆದಿದೆ.
ಜುಲೈ 24ರ ಸಂಜೆ 20ಕ್ಕೂ ಅಧಿಕ ಜನ ಈ ಪ್ರದೇಶದಲ್ಲಿ ಜಮಾಯಿಸಿ ಪರಸ್ಪರ ಕೆಸರಾಟ ನಡೆಸಿದರು. `ಅನಾಧಿಕಾಲದಿಂದಲೂ ನಾವು ಇಲ್ಲಿ ಮೀನುಗಾರಿಕೆ ನಡೆಸುತ್ತಿದ್ದೇವೆ. ಈ ಭೂಮಿ ತಮ್ಮದು ಎಂದು’ ತೊರ್ಕೆ ಮಸಾಕಲ್’ನ ಪರಮೇಶ್ವರ ಮಂಕಾಳಿ ಹರಿಕಂತ್ರ ಹೇಳಿದ್ದು, `ಮೀನು ಹಿಡಿಯಲು ನಾವು ಗ್ರಾಮ ಪಂಚಾಯತದಿoದ ಟೆಂಡರ್ ಪಡೆದಿದ್ದೇವೆ’ ಎಂದು ಪ್ರವರ್ ತಿಮ್ಮಪ್ಪ ಹರಿಕಂತ್ರ ಹಾಗೂ ತೋರ್ಕೆಯ ಪ್ರಮೋದ ದಯಾನಂದ ಹೊಸ್ಕಟ್ಟಾ ವಾದಿಸಿದರು. ಈ ಎರಡು ತಂಡದವರ ಜನರ ನಡುವೆ ಮೀನು ಹಿಡಿಯುವ ವಿಷಯವಾಗಿ ನಡೆದ ಜಗಳ ಗೋಕರ್ಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಎರಡು ಕಡೆಯವರ ದೂರು ಆಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು `ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಿ’ ಎಂದು ದೋಷಾರೋಪಣ ಪಟ್ಟಿ ಸಲ್ಲಿಸುವ ತಯಾರಿ ನಡೆಸಿದ್ದಾರೆ.
ಹೊಸ್ಕಟ್ಟಾದ ಪರಮೇಶ್ವರ ಮಂಕಾಳಿ ಹರಿಕಂತ್ರ, ಮಂಜುನಾಥ ಮಂಕಾಳಿ ಹರಿಕಂತ್ರ, ಅನಂತ ಮಂಕಾಳಿ ಹರಿಕಂತ್ರ, ರಾಜು ವೆಂಕಟ್ರಮಣ ಹರಿಕಂತ್ರ, ಜಗದೀಶ ವೆಂಕಟ್ರಮಣ ಹರಿಕಂತ್ರ ಎಂಬಾತರ ವಿರುದ್ಧ ಪ್ರವರ್ ತಿಮ್ಮಪ್ಪ ಹರಿಕಂತ್ರ ದೂರು ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ ತೊರ್ಕೆ ಮಸಾಕಲ್’ನ ಪರಮೇಶ್ವರ ಮಂಕಾಳಿ ಹರಿಕಂತ್ರ ಅವರು ಹೊಸ್ಕಟ್ಟಾದ ಆರೋಪಿ ಸದಾನಂದ ಮಂಕಾಳಿ ಹರಿಕಂತ್ರ, ಗೋಪಾಲ ಹುಲಿಯಪ್ಪ ಹೊಸ್ಕಟ್ಟ, ಕೃಷ್ಣ ಹುಲಿಯಪ್ಪ ಹೊಸಕಟ್ಟಾ, ರಾಮಚಂದ್ರ ಬೊಮ್ಮಯ್ಯ ಹರಿಕಂತ್ರ, ಘಟ್ಟ ಹುಲಿಯಪ್ಪ ಹರಿಕಂತ್ರ, ಪ್ರದೀಪ ದೇವಣ್ಣ ಮಸಾಕಲ್, ರಾಘು ತಿಮ್ಮಪ್ಪ ಹರಿಕಂತ್ರ, ರಾಮಾ ವೆಂಕಟ್ರಮಣ ಹರಿಕಂತ್ರ, ಪ್ರಮೋದ ದಯಾನಂದ ಹರಿಕಂತ್ರ, ಶಿವಾನಂದ ಗಜಾನನ ಹರಿಕಂತ್ರ, ದಯಾನಂದ ರಾಮಾ ಹರಿಕಂತ್ರ, ಜೈವಂತ ಗೋವಿಂದ ಹರಿಕಂತ್ರ, ಪ್ರವರ ತಿಮ್ಮಪ್ಪ ಹರಿಕಂತ್ರ, ನಾಗರಾಜ ಮೋಹನ ಹರಿಕಂತ್ರ, ಮಾದೇವ ಸುಕ್ರು ಹರಿಕಂತ್ರ ಎಂಬ 15 ಜನರ ವಿರುದ್ಧ ಆರೋಪ ಮಾಡಿದ್ದಾರೆ.
`ನಮ್ಮ ಕುಟುಂಬದವರು 1981ರಿಂದ ತೋರ್ಕೆಯ ಸಿದ್ದೇಶ್ವರ ಜಂತ್ರಾಡಿ ಬಳಿ ಮೀನುಗಾರಿಕೆ ಮಾಡಿಕೊಂಡಿದ್ದು ಇದಕ್ಕೆ ಅಡ್ಡಿಪಡಿಸಿದ ಎದುರುದಾರರು ಇಡೀ ಕುಟುಂಬವನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದು, ಯಾವ ನ್ಯಾಯಾಲಯಕ್ಕೆ ಹೋದರೂ ಬಿಡುವುದಿಲ್ಲ’ ಎಂದು ಹೆದರಿಸಿದ ಬಗ್ಗೆ ಪರಮೇಶ್ವರ ಮಂಕಾಳಿ ಹರಿಕಂತ್ರ ದೂರಿದ್ದಾರೆ.

Leave a Reply

Your email address will not be published. Required fields are marked *

You cannot copy content of this page