6
September 28, 2026

ಮಳೆ ನೀರಿಗೆ ಮನೆಗೆ ಬಂದ ನಾಗರ!

ಭಟ್ಕಳ: ಚರಂಡಿ ನಿರ್ವಹಣೆ ಸರಿಯಿಲ್ಲದ ಕಾರಣ ಮಳೆ ನೀರು ಮನೆಗೆ ಬರುತ್ತಿದ್ದು, ಮಳೆ ನೀರಿನಲ್ಲಿ ಕೊಚ್ಚಿದ ನಾಗರ ಹಾವು ಕೊಂಡು ಬಂದ ವಾಸುದೇವ ನಾಯಕ ಎಂಬಾತರ ಮನೆಯಲ್ಲಿ ಆಶ್ರಯ ಪಡೆದಿತ್ತು. ನಂತರ ಅವರ ಮನೆ ಮುಂದಿನ ಅಂಗಡಿ ಬಾಗಿಲಿಗೆ ತೆರಳಿ ಹೆಡೆ ಬಿಚ್ಚಿ ಆತಂಕ ಮೂಡಿಸಿತು.
ಪುರಸಭೆ ವಾರ್ಡ ನಂ 22ರಲ್ಲಿ ಸಣ್ಣ ಮಳೆ ಬಂದರೂ ನೆರೆ ಬರುತ್ತದೆ. ಆಗ ವಿಷಜಂತುಗಳು ಮನೆಯೊಳಗೆ ಆಗಮಿಸುತಿದೆ. ಬುಧವಾರ ಸಂಜೆ 8 ಅಡಿ ಉದ್ದದ ನಾಗರ ಹಾವು ವಾಸುದೇವ ಅವರ ಮನೆಗೆ ಬಂದು, ನಂತರ ಮುಂದಿನ ಅಂಗಡಿಯ ಬಾಗಿಲಿಗೆ ಸುತ್ತಿಕೊಂಡಿತ್ತು. ನಂತರ ಶಿರಾಲಿಯಿಂದ ಬಂದ ಹಾವಾಡಿಗರು ಹಾವನ್ನು ಹಿಡಿದು ಕಾಡಿಗೆ ಬಿಟ್ಟರು.

Leave a Reply

Your email address will not be published. Required fields are marked *

You cannot copy content of this page