ಶಿರಸಿ: ಶಿರಸಿಯಿಂದ ಹಾವೇರಿಗೆ ತೆರಳುವ ರಸ್ತೆ ದಾಸನಕೊಪ್ಪದಲ್ಲಿ ಸಾಕಷ್ಟು ಹೊಂಡಗಳಿoದ ಕೂಡಿದ್ದು, ಈ ರಸ್ತೆ ನಿರ್ವಹಣೆ ಮಾಡಬೇಕಾದವರಿಗೆ ಇಲ್ಲಿ ಹೊಂಡ ಬಿದ್ದಿರುವುದೇ ಗೊತ್ತಿಲ್ಲ!
`ಇಲ್ಲಿ ಹೊಂಡಬಿದ್ದಿದೆ ನೋಡಿ’ ಎಂದು ರಸ್ತೆ ನಿರ್ವಹಣೆ ನೋಡಿಕೊಳ್ಳುವ ಪ್ರೊಜೆಕ್ಟ್ ಮ್ಯಾನೇಜರ್’ಗೆ ಜನ ಫೋನ್ ಮಾಡಿ ಹೇಳುತ್ತಿದ್ದಾರೆ. ಜನರ ಫೋನ್’ಗೆ ಬೆದರಿದ ಪ್ರೊಜೆಕ್ಟ್ ಮ್ಯಾನೇಜರ್ ವೆಂಕಟ್ರಮಣ ಇದೀಗ `ಸ್ವಿಚ್ ಆಫ್’ ಆಗಿದ್ದಾರೆ. ರಸ್ತೆಯಲ್ಲಿ ಹೊಂಡ ಬಿದ್ದಿರುವ ಬಗ್ಗೆ ಕಾಂಗ್ರೆಸ್ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಫೇಸ್ಬುಕ್’ನಲ್ಲಿ ಬರೆದುಕೊಂಡಿದ್ದಾರೆ. ಪ್ರಸನ್ನ ಶೆಟ್ಟಿ ಅವರೇ ಪ್ರಾಜೆಕ್ಟ್ ಮ್ಯಾನೇಜರ್ ಅವರ ಫೋನ್ ನಂ ಹಂಚಿಕೊoಡಿದ್ದು `ಹೊಂಡ ಮುಚ್ಚುವವರು ಯಾರು?’ ಎಂದು ಅನೇಕರು ಮ್ಯಾನೇಜರಿಗೆ ಫೋನ್ ಮಾಡಿ ಪ್ರಶ್ನಿಸಿದ್ದಾರೆ. ಇನ್ನೂ ಚಿಪಗಿಯಿಂದ ದಾಸನಕೊಪ್ಪವರೆಗಿನ ರಸ್ತೆ ಸಹ ಸಂಪೂರ್ಣವಾಗಿ ಹಾಳಾಗಿದೆ. ಇಲ್ಲಿನ ಹೊಂಡ ಮುಚ್ಚಲು ಸಹ ಇಚ್ಚಾಶಕ್ತಿಯ ಕೊರತೆ ಎದ್ದು ತೋರುತ್ತಿದೆ. ಅಲ್ಲಲ್ಲಿ ಸಾರ್ವಜನಿಕರೇ ರಸ್ತೆ ಹೊಂಡ ಮುಚ್ಚುವ ಕೆಲಸ ಶುರು ಮಾಡಿದ್ದಾರೆ.
ರಸ್ತೆ ಹಾಳಾಗಿದ್ದು ಅಧಿಕಾರಿಗೆ ಗೊತ್ತಿಲ್ಲ!

Leave a comment