ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ಬಿದ್ದ ಮಣ್ಣನ್ನು ಭಾಗಶಃ ತೆಗಿಯಲಾಗಿದ್ದು, ಅಲ್ಲಿನ ಮಣ್ಣಿನ ರಾಡಿಯಲ್ಲಿ ಲಕ್ಷಣ ನಾಯ್ಕ ಅವರು ನಡೆಸುತ್ತಿದ್ದ ಚಹಾ ಅಂಗಡಿಯ ಅವಶೇಷಗಳು ಪತ್ತೆಯಾಗಿದೆ. ಚಹಾ ಅಂಗಡಿಯಲ್ಲಿ ಬಳಸುತ್ತಿದ್ದ ಬಕೆಟ್ ಹಾಗೂ ಕೆಲ ಪಾತ್ರೆಗಳು ಮಣ್ಣಿನ ರಾಡಿಯಲ್ಲಿ ಕಾಣಿಸಿವೆ.
ಜು 16ರಂದು ಶಿರೂರಿನಲ್ಲಿ ಗುಡ್ಡ ಕುಸಿತವಾಗಿತ್ತು. ಚಹಾ ಅಂಗಡಿಯ ಮೇಲೆ ಭಾರೀ ಪ್ರಮಾಣದ ಮಣ್ಣು ಬಿದ್ದಿತ್ತು. ಚಹದ ಅಂಗಡಿಗೆ ಆಗಮಿಸಿದ್ದ ಲಾರಿ ಚಾಲಕರು ಹಾಗೂ ಸ್ಥಳೀಯರು ಅವಘಡದಲ್ಲಿ ಸಿಲುಕಿದ್ದರು. ಹೀಗೆ ಸಿಲುಕಿದವರ ಪೈಕಿ 3 ಜನರ ಸುಳಿವು ಈವರೆಗೂ ಸಿಕ್ಕಿಲ್ಲ.
ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಹೋಟೆಲ್ ಕೆಲಸಕ್ಕೆ ಬಂದಿದ್ದ ಜಗನ್ನಾಥ್ ಹಾಗೂ ಅಂಗಡಿಗೆ ಬಂದಿದ್ದ ಲೊಕೇಶ್ ನಾಯ್ಕ ಹುಡುಕಾಟ ಮುಂದುವರೆದಿದೆ.
ಮಣ್ಣಿನಡಿ ಕಾಣಿಸಿದ ಟೀ ಅಂಗಡಿ ಅವಶೇಷ

Leave a comment