6 Skip to content

ವ್ಯಾಪಕ ಮಳೆಗೆ ಬೆಳೆ ಹಾನಿ: ವಿಮೆ ಮಾಡಿಸಿದವರಿಗೆ ನಷ್ಟ ಪರಿಹಾರ

ಕುಮಟಾ: ವ್ಯಾಪಕ ಮಳೆ ಪರಿಣಾಮ ನದಿ ಹಾಗೂ ಗಜನಿ ಪ್ರದೇಶದ ಅಂಚಿನಲ್ಲಿ ಬೆಳೆದ ಭತ್ತದ ಬೆಳೆ ಹಾಳಾಗಿದೆ.
ಹೆಗಡೆ ಬಾಡ, ಹುಬ್ಬಣಗೇರಿ, ಕಾಗಾಲ, ಅಘನಾಶಿನಿ, ಹೊಲನಗದ್ದೆ, ಬರ್ಗಿ, ಬೆಟ್ಕುಳಿ, ಐಗಳಕೂರ್ವೆ, ಚತ್ರಕೂರ್ವೆ, ಗೋಕರ್ಣ, ಹಿರೇಗುತ್ತಿ, ಮೂರೂರು, ಕಲ್ಲಬ್ಬೆ ಹೋಳೆಗದ್ದೆ, ಹೊರಭಾಗ, ಕಡೇಕೊಡಿ, ಧಾರೇಶ್ವರ ಹಾಗೂ ದಿವಳ್ಳಿ ಭಾಗದ ರೈತರು ಬೆಳೆಹಾನಿಯಿಂದ ತತ್ತರಿಸಿದ್ದಾರೆ. ಬೆಳೆ ಹಾನಿ ಪ್ರದೇಶಕ್ಕೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕುಮಟಾ ತಾಲೂಕಿನಲ್ಲಿ ಅಂದಾಜು 60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿರುವುದು ಗಮನಕ್ಕೆ ಬಂದಿದೆ.
ವಿಮೆ ಪರಿಹಾರ:
ಫಸಲ್ ಭೀಮಾ ಯೋಜನೆ ಅಡಿ ವಿಮೆ ಮಾಡಿಸಿದ್ದ ರೈತರಿಗೆ ಬೆಳೆ ನಷ್ಟದ ಪರಿಹಾರ ಸಿಗಲಿದೆ. ಅಂಥ ರೈತರು ಗ್ರಾಮ ಪಂಚಾಯತ, ಕಂದಾಯ ಅಧಿಕಾರಿ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಅರ್ಜಿ ಸಲ್ಲಿಸಬಹುದು. ಅಗಷ್ಟ್ 16ರವರೆಗೆ ಬೆಳೆ ವಿಮೆ ಮಾಡಲು ಅವಕಾಶಗಳಿದ್ದು, ಸಹಕಾರಿ ಸಂಘ ಅಥವಾ ಬ್ಯಾಂಕುಗಳ ಮೂಲಕ ವಿಮಾ ಕಂತು ಪಾವತಿಸಲು ಸಾಧ್ಯ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

Leave a comment

Leave a Reply

You cannot copy content of this page