6 Skip to content

ನದಿಗೆ ಬಿದ್ದ ಡ್ರೋಣಾಚಾರ್ಯ!

ಶಿರೂರು ಗುಡ್ಡದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಡ್ರೋಣ್ ಶುಕ್ರವಾರ ನದಿಗೆ ಬಿದ್ದಿರುವ ಬಗ್ಗೆ ಮಾಹಿತಿ ಇದ್ದು, ಈ ಮಾಹಿತಿ ಅಧಿಕಾರಿಗಳಿಂದ ಅಧಿಕೃತಗೊಂಡಿಲ್ಲ.
ರಕ್ಷಣಾ ಕಾರ್ಯಾಚರಣೆ ನಡೆಸಲು ಬಳಸಿದ ಡ್ರೋಣ್ ನದಿಗೆ ಬಿದ್ದಿದೆ. ಖಾಸಗಿ ಡ್ರೋಣ್ ಇಲ್ಲಿ ಹಾರಾಟ ನಡೆಸಿದ ಕಾರಣ ಅದರ ಸಿಗ್ನಲ್ ಕ್ಲಾಶ್ ಆಗಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ ಎಂಬ ಮಾಹಿತಿ ಇದೆ. ಆದರೆ, ರಕ್ಷಣಾ ಕಾರ್ಯಾಚರಣೆಯ ಭಾಗವಾಗಿರುವ ಪೊಲೀಸರು ಈ ಮಾಹಿತಿಯನ್ನು ದೃಢಪಡಿಸಿಲ್ಲ. ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಸಹ ಈ ಇಂಥಹ ಯಾವುದೇ ಸನ್ನಿವೇಶ ನಡೆದಿಲ್ಲ ಎಂದು ಇದೀಗ ಖಚಿತಪಡಿಸಿದ್ದಾರೆ. ಡ್ರೋಣ್ ನೀರಿಗೆ ಬಿದ್ದಿದ್ದಲ್ಲ. ಅದನ್ನು ಉದ್ದೇಶಪೂರ್ವಕವಾಗಿ ನೀರಿನ ಒಳಗಿನ ಕಾರ್ಯಾಚರಣೆಗೆ ಬಳಸಲಾಗಿದೆ ಎಂದು ಸಹ ಹೇಳಲಾಗುತ್ತದೆ. ಶಿರೂರು ಗುಡ್ಡ ಹಾಗೂ ಗಂಗಾವಳಿ ನದಿ ಪ್ರದೇಶದಲ್ಲಿ `ಅಡ್ವಾನ್ಸ್ಡ್ ಡ್ರೋನ್ ಬೆಸ್ಟ್ ಇಂಟೆಲಿಜೆoಟ್ ಅಂಡರ್ ಗ್ರೌಂಡ್ಡ್ ಬರ್ಡ್ ಆಬ್ಜೆಕ್ಟ್ ಡಿಟೆಕ್ಟರ್’ ಎಂಬ ಡ್ರೋನ್ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ನಾಲ್ಕು ಕಡೆ ಲೋಹ ಪತ್ತೆಯಾಗಿದ್ದು, ಅದನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ.

 

Leave a comment

Leave a Reply

You cannot copy content of this page