ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ನಿರ್ಲಕ್ಷ್ಯ ಚಾಲನೆ ಮಾಡುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.
ಶಿರಸಿ, ಕಾರವಾರ, ಭಟ್ಕಳ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಇದೀಗ ರೆಡಾರ್ ಗನ್ ಮೂಲಕ ವಾಹನ ಸವಾರರನ್ನು ನಿಯಂತ್ರಿಸುವ ಕೆಲಸ ನಡೆಯುತ್ತಿದೆ. ವೇಗದ ವಾಹನ ಚಲಾಯಿಸುವವರನ್ನು ಗುರುತಿಸಿ ಅವರಿಗೆ ಬಿಸಿ ಮುಟ್ಟಿಸುವ ಪೊಲೀಸರು ದಂಡವನ್ನು ವಸೂಲಿ ಮಾಡುತ್ತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ನಗರ ವ್ಯಾಪ್ತಿಯಲ್ಲಿ ಅಡ್ಡಾದಿಡ್ಡಿ ಬೈಕ್ ಓಡಿಸುವವರನ್ನು ಠಾಣೆಗೆ ಕರೆಯಿಸಿ ಕಿವಿಮಾತು ಹೇಳುತ್ತಿದ್ದಾರೆ.
ಈ ಕುರಿತಾದ ಚಿತ್ರಣ ಇಲ್ಲಿ ನೋಡಿ..

Leave a comment