ರಾಜ್ಯ ಸರ್ಕಾರದ ಎರಡು ಹಗರಣಗಳ ವಿರುದ್ಧ ಬಿಜೆಪಿ ಪಾದಯಾತ್ರೆ ನಡೆಸುತ್ತಿರುವ ಬೆನ್ನಲ್ಲೆ ಇದೀಗ ನಿಯಮಗಳನ್ನು ಮೀರಿ ವರ್ಗಾವಣೆ ನಡೆಸಿದ ಇನ್ನೊಂದು ಹಗರಣ ಹೊರಬಿದ್ದಿದೆ. ಎಲ್ಲಾ ನಿಯಮಗಳನ್ನು ಮೀರಿ ಒಂದೇ ಇಲಾಖೆಯ ಒಂದೇ ಹುದ್ದೆಯ 200ಕ್ಕೂ ಅಧಿಕ ಅಧಿಕಾರಿಗಳನ್ನು ಒಂದೇ ಆದೇಶದಲ್ಲಿ ಏಕಕಾಲಕ್ಕೆ ವರ್ಗಾವಣೆ ಮಾಡಿ ಅರಣ್ಯ ಇಲಾಖೆ ಅವಾಂತರ ಮಾಡಿಕೊಂಡಿದೆ.
ವಾರ್ಷಿಕ ಶೇ 6ಕ್ಕಿಂತ ಅಧಿಕ ಪ್ರಮಾಣದಲ್ಲಿ ವರ್ಗಾವಣೆ ಮಾಡಬಾರದು ಎಂಬ ನಿಯಮವಿದ್ದರೂ ಅದನ್ನು ಮೀರಿ ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವರ ವಲಯ ಅರಣ್ಯಾಧಿಕಾರಿಗಳನ್ನು ವರ್ಗ ಮಾಡಲಾಗಿದೆ. ಅದರಲ್ಲಿಯೂ 60ಕ್ಕೂ ಅಧಿಕ ಅರಣ್ಯಾಧಿಕಾರಿಗಳಿಗೆ ಸರ್ಕಾರ ಯಾವುದೇ ಸ್ಥಾನ ನೀಡಿಲ್ಲ!
ವಲಯ ಅರಣ್ಯಾಧಿಕಾರಿ ಹುದ್ದೆಯಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಗೆ ಬಡ್ತಿ ನೀಡುವ ವಿಚಾರದಲ್ಲಿ ಸಹ ರಾಜ್ಯ ಸರ್ಕಾರ ಆತುರದ ನಿರ್ಧಾರ ತೋರಿರುವುದು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರಿ ನೌಕರರಿಗೆ ಬಡ್ತಿ ನೀಡುವಾಗ ನೇರ ನೇಮಕಾತಿ ಆಗಿರುವವರು ಹಾಗೂ ಮುಂಬಡ್ತಿ ಪಡೆದ ಎರಡು ವೃಂದಗಳಿoದಲೂ ಸರಾಸರಿ 50:50ರ ಅನುಪಾತವನ್ನು ಪರಿಗಣಿಸಬೇಕು ಎಂಬ ನಿಯಮ ಇದೆ. ಆದರೆ, ಈ ನಿಯಮ ಸಹ ಪಾಲನೆಯಾಗಿಲ್ಲ. ಕೋಟಿ ಲೆಕ್ಕಾಚಾರದಲ್ಲಿ ಹಣಕಾಸಿನ ವ್ಯವಹಾರ ನಡೆದಿರುವುದೇ ನಿಯಮ ಮೀರಿ ವರ್ಗಾವಣೆ ಆದೇಶಕ್ಕೆ ಕಾರಣ ಎಂಬ ಮಾತಿದೆ.




Discussion about this post