ದಾoಡೇಲಿ: ಕಳ್ಳತನವಾಗಿದ್ದ 5 ಮೊಬೈಲ್ ಹುಡುಕುವಲ್ಲಿ ಪೊಲೀಸರು ಶ್ರಮಿಸಿದ್ದು, ಆ ಮೊಬೈಲ್’ನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಮೊಬೈಲ್ ಕಳ್ಳತನದ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸಿಇಐಆರ್ ಪೋರ್ಟಲ್ ಮೂಲಕ ಮೊಬೈಲ್ ಪತ್ತೆ ಮಾಡಿದ್ದಾರೆ. ನಂತರ ಮೊಬೈಲ್ ಮಾಲಕರನ್ನು ಠಾಣೆಗೆ ಕರೆಯಿಸಿ, ಅವರಿಗೆ ಮೊಬೈಲ್ ಹಿಂತಿರುಗಿಸಿದ್ದಾರೆ. ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಕಂಡಿ ಈ ವೇಳೆ ಮೊಬೈಲ್ ಜೋಪಾನವಾಗಿರಿಸಿಕೊಳ್ಳುವಂತೆ ವಾರಸುದಾರರಿಗೆ ತಿಳಿಸಿದರು.
ಪೊಲೀಸ್ ವೃತ್ತ ನಿರೀಕ್ಷಕ ಭೀಮಣ್ಣ ಸೂರಿ, ಪಿಎಸ್‌ಐಗಳಾದ ಐ.ಆರ್ ಗಡ್ಡೇಕರ್ ಹಾಗೂ ಯಲ್ಲಪ್ಪ ಎಸ್ ಇದ್ದರು.




Discussion about this post