ದಾಂಡೇಲಿ: ಗಾಂಧಿನಗರ ವಾರ್ಡ್ ನಂ 2ರಲ್ಲಿ ಕಿರು ಸೇತುವೆ ಕುಸಿದಿದ್ದು, ಟಿಪ್ಪರ್ ಹೂತು ಹೋಗಿದೆ.
ಜಲ್ಲಿಕಲ್ಲುಗಳನ್ನು ತುಂಬಿಕೊoಡು ಬರುತ್ತಿದ್ದ ಟಿಪ್ಪರ್ ಕಿರು ಸೇತುವೆ ಮೇಲೆ ಪ್ರವೇಶಿಸಿದ ಕೂಡಲೇ ಸೇತುವೆ ನೆಲಕಚ್ಚಿದೆ. ಇಲ್ಲಿ ಯುಜಿಡಿ ಕಾಮಗಾರಿ ನಡೆಸಲು ರಸ್ತೆ ಬದಿ ಅಗೆದು ಪೈಪ್ ಅಳವಡಿಸಿ ಮುಚ್ಚಲಾಗಿತ್ತು. ಅಗೆದ ಹೊಂಡವನ್ನು ಸರಿಯಾಗಿ ಮುಚ್ಚದ ಪರಿಣಾಮ ಸೇತುವೆ ಕುಸಿದಿರುವ ಬಗ್ಗೆ ದೂರುಗಳಿವೆ. ನಗರಸಭೆ ಸದಸ್ಯ ಬುಧವಂತ ಗೌಡ ಪಾಟೀಲ್ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.





Discussion about this post