ಶಿರಸಿ: ಬಿಸಲಕೊಪ್ಪ ಬಳಿಯ ಮಲಳಗಾಂವ ಗ್ರಾಮದಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದೆ. ಈ ಬಗ್ಗೆ ಊರಿನವರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅರಣ್ಯ ಸಿಬ್ಬಂದಿ ಪಟಾಕಿ ಪ್ರಯೋಗ ನಡೆಸಿದರು. ಆದರೆ, ಕಾಡುಕೋಣಗಳು ಇದಕ್ಕೆ ಹೆದರಲಿಲ್ಲ.
ಕೆಲ ತಿಂಗಳಿನಿoದ ರೈತರ ಜಮೀನುಗಳಿಗೆ ಕಾಡುಕೋಣ ನುಗ್ಗುತ್ತಿದೆ. ಅಲ್ಲಿ ಬೆಳೆಯಲಾದ ಫಸಲುಗಳನ್ನು ನಾಶ ಮಾಡಿದೆ. ಭತ್ತ, ಕಬ್ಬು, ಜೋಳ, ಅಡಿಕೆ ಜೊತೆ ವಿವಿಧ ಬೆಳೆಗಳು ವನ್ಯಜೀವಿ ಪಾಲಾಗಿದೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಲಕ್ಷಾಂತರ ರೂ ಹಾನಿಯಾಗಿದೆ.
`ಕಾಡುಕೋಣಗಳಿಗೆ ಕಡಿವಾಣ ಹಾಕಿ’ ಎಂದು ರೈತರು ಅರಣ್ಯ ಇಲಾಖೆಗೆ ದುಂಬಾಲು ಬಿದ್ದಿದ್ದಾರೆ. ಜೊತೆಗೆ ಊರನವರೇ ಸೇರಿ ಪಟಾಕಿ ಸಿಡಿಸಿದ್ದಾರೆ. ಮೊದಲ ಎರಡು ದಿನ ಪಟಾಕಿ ಸದ್ದಿಗೆ ಬೆದರಿದ ಕಾಡುಕೋಣ ನಂತರ ಮತ್ತೆ ಹೆದರಿಲ್ಲ. ಪಟಾಕಿ ಸದ್ದು ಅವುಗಳಿಗೆ ರೂಢಿಯಾಗಿದ್ದು, ಒಮ್ಮೆ ಮಾತ್ರ ಕಾಡಿಗೆ ಹೋಗಿ ಮತ್ತೆ ಊರ ಕಡೆ ಮುಖ ಮಾಡುತ್ತಿವೆ. ಹೀಗಾಗಿ ಕಾಡುಕೋಣ ಓಡಿಸುವುದು ಅರಣ್ಯ ಇಲಾಖೆಗೆ ಸಹ ಸವಾಲಾಗಿದೆ.




Discussion about this post