ಶಿರಸಿ: ಬೈಕ್ ಅಪಘಾತ ನಡೆದಿದೆ ಎಂದು ಭಾವಿಸಿ ನೆರವು ನೀಡಲು ಹೋಗಿದ್ದ ರಾಜು ನಾಗಪ್ಪ ಬಾಸೂರು ಎಂಬಾತರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ, ಅವರ ಬಳಿಯಿದ್ದ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.
ಶಿರಸಿ ದೇವಿಕೆರೆಯ ರಾಜು ಬಾಸೂರು ಸರ್ವಗ್ರಾಮ ಪಿನೇಕರ್ ಕಂಪನಿ ಉದ್ಯೋಗಿ. ಅವರು ಅಗಸ್ಟ 10ರ ಮಧ್ಯಾಹ್ನ 2.15ಕ್ಕೆ ಶಿರಸಿ-ಹಾವೇರಿ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದರು. ಇಲ್ಲಿನ ಕಾಳಂಗಿ ತಿರುವಿನಲ್ಲಿ ಬೈಕ್ ಬಿದ್ದಿದ್ದು, ನಾಲ್ವರು ಅದನ್ನು ಮೇಲೆ ಎತ್ತುತ್ತಿದ್ದರು. ಅಲ್ಲಿ ಅಪಘಾತವಾಗಿರಬಹುದು ಎಂದು ಭಾವಿಸಿದ ರಾಜು ಬಾಸೂರು ಅವರಿಗೆ ಸಹಾಯ ಮಾಡಲು ಹತ್ತಿರ ಹೋದರು.
ಆಗ, ಆ ನಾಲ್ವರು ರಾಜು ಬಾಸೂರು ಅವರನ್ನು ಹಿಡಿದು ಥಳಿಸಿ ಅವರ ಕಿಸೆಗೆ ಕೈ ಹಾಕಿ ಅಲ್ಲಿದ್ದ 5200ರೂ ಹಣ ಎಗರಿಸಿದ್ದಾರೆ. ಜೊತೆಗೆ ಅಲ್ಲಿ ಬಿದ್ದಿದ್ದ ಬೈಕ್ ಏರಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬನವಾಸಿ ಪೊಲೀಸ್ ಠಾಣೆ ಪಿಸೈ ಯಲ್ಲಾಲಿಂಗ ಕನ್ನೂರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.





Discussion about this post