6
September 29, 2026

Bridge collapse | ಮದ್ಯರಾತ್ರಿಯ ಮದ್ಯದ ನಶೆ: ಲಾರಿ ಮೇಲಿನ ಪ್ರೀತಿ ಚಾಲಕನ ಮೇಲಿಲ್ಲ!

ಕಾರವಾರದ ಕಾಳಿ ಸಂಗಮ ಪ್ರದೇಶದಲ್ಲಿದ್ದ ಹಳೆ ಸೇತುವೆ ಕುಸಿದಾಗ (bridge collapse) ಲಾರಿಯಲ್ಲಿ ಸಿಲುಕಿಕೊಂಡಿದ್ದ ಚಾಲಕ ಆಸ್ಪತ್ರೆ ಸೇರಿದ್ದು, ಮಂಗಳವಾರ ರಾತ್ರಿ ಆಗಮಿಸಿದ ಲಾರಿ ಮಾಲಕ ಚಾಲಕನ ಆರೋಗ್ಯವನ್ನು ವಿಚಾರಿಸದೇ ಲಾರಿಗಾಗಿ ರಸ್ತೆ ಮೇಲೆ ಕುಳಿತು ಪ್ರತಿಭಟಿಸಿದ್ದಾನೆ.

ಮದ್ಯದ ನಶೆಯಲ್ಲಿದ್ದ ಈತ ಲಾರಿ ಹೊರತೆಗೆಯದೇ ಇದ್ದಲ್ಲಿ `ಸೇತುವೆ ಮೇಲಿಂದ ಹಾರಿ ಜೀವ ಬಿಡುವೆ’ ಎಂದು ಪೊಲೀಸರನ್ನು ಬೆದರಿಸಿದ್ದಾನೆ. ಈ ವೇಳೆ ಅಲ್ಲಿದ್ದ ಕೆಲವರುಆತನನ್ನು ತಡೆದು ತಪರಾಕಿ ಬಾರಿಸಿದ್ದಾರೆ.
ಅಗಸ್ಟ 7ರಂದು ಸೇತುವೆ ಕುಸಿತವಾಗಿತ್ತು. ಈ ವೇಳೆ ಸೇತುವೆ ಮೇಲಿದ್ದ ತಮಿಳುನಾಡಿನ ಲಾರಿ ನದಿಗೆ ಬಿದ್ದಿತ್ತು. ಲಾರಿಯಲ್ಲಿದ್ದ ಚಾಲಕನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರು. ಗಾಯಗೊಂಡ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಿಲ್ಲಾಡಳಿತ ಆತನಿಗೆ ಆರ್ಥಿಕ ನೆರವು ನೀಡಿದೆ. ಆದರೆ, ಲಾರಿ ಮಾಲಕ ಈವರೆಗೂ ಆತನ ಕ್ಷೇಮ ವಿಚಾರಿಸಿಲ್ಲ.

`ಲಾರಿ ಬಿದ್ದು ತುಂಬಾ ದಿನವಾಯಿತು. ಯಾರೂ ಈ ಬಗ್ಗೆ ಕಾಳಜಿವಹಿಸುತ್ತಿಲ್ಲ’ ಎಂದು ಲಾರಿ ಮಾಲಕ ಹೆದ್ದಾರಿ ನಡುವೆ ಕೂತು ಪ್ರತಿಭಟಿಸಿದ್ದಾನೆ. ಮುರಿದ ಸೇತುವೆ ಮೇಲೆ ಏರಿ ಆತ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದು, ಈ ವೇಳೆ ರಕ್ಷಣೆಗೆ ತೆರಳಿದವರ ಜೊತೆ ವಾಗ್ವಾದ ನಡೆಸಿದ್ದಾನೆ. ಈತನ ಜೊತೆ ಇನ್ನೂ ಇಬ್ಬರು ಇದ್ದು ಎಲ್ಲರನ್ನು ಪೊಲೀಸರು ಸೇತುವೆಯಿಂದ ಬೇರೆ ಪ್ರದೇಶಕ್ಕೆ ಕರೆತಂದರು.

ಈ ಘಟನಾವಳಿಗಳ ವಿಡಿಯೋ ಇಲ್ಲಿ ನೋಡಿ..

 

Leave a Reply

Your email address will not be published. Required fields are marked *

You cannot copy content of this page