Shiruru | ನದಿ ಆಳದಲ್ಲಿ ಅಪಾಯಕಾರಿ ಕಾರ್ಯಾಚರಣೆ: ಮುಳುಗು ತಜ್ಞರ ಜೊತೆ ಚರ್ಚಿಸಿದ ಜಿಲ್ಲಾಧಿಕಾರಿ
ಶಿರೂರು (Shiruru) ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾದ ಅರ್ಜುನನ ಲಾರಿ ಹಾಗೂ ಕಣ್ಮರೆಯಾದ ಮೂವರಿಗಾಗಿ ಬುಧವಾರ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಶಿರೂರಿಗೆ ತೆರಳಿ ಶೋಧ ಕಾರ್ಯಾಚರಣೆ ವೀಕ್ಷಿಸಿ ಮುಳುಗು ತಜ್ಞರಿಂದ ಮಾಹಿತಿ ಪಡೆದರು.
ಮಂಗಳವಾರ ಸ್ಥಳಕ್ಕೆ ಆಗಮಿಸಿದ ಮುಳುಗುತಜ್ಞ ಈಶ್ವರ ಮಲ್ಪೆ ನಿರಂತರ ಶೋಧ ನಡೆಸುತ್ತಿದ್ದಾರೆ. ಮಂಗಳವಾರ ಮಧ್ಯಾಹ್ನದ ವೇಳೆ ಲಾರಿಯ ಕೆಲ ಅವಶೇಷಗಳು ದೊರೆತಿದ್ದು, `ಅದು ತಮ್ಮದೇ ಲಾರಿಯದ್ದು’ ಎಂದು ಕೇರಳದ ಲಾರಿ ಮಾಲಕ ಖಚಿತ ಪಡಿಸಿದ್ದಾರೆ. ಹೀಗಾಗಿ ಅದೇ ಸ್ಥಳದಲ್ಲಿ ಲಾರಿ ನೀರಿನಾಳದ ಮಣ್ಣಿನಡಿ ಇರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅದೇ ಭಾಗದಲ್ಲಿ ಶೋಧ ನಡೆಯುತ್ತಿದೆ. ಈ ಬಗ್ಗೆ ಈಶ್ವರ ಮಲ್ಪೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರು. ಈ ವೇಳೆ ಕಾರ್ಯಾಚರಣೆಯಲ್ಲಿರುವ ಸಿಬ್ಬಂದಿ ಸುರಕ್ಷತೆಗೆ ಒತ್ತು ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸಲಹೆ ನೀಡಿದರು.
ಕಾರ್ಯಾಚರಣೆಯ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಪಡೆದ ವಿಡಿಯೋ ಇಲ್ಲಿ ನೋಡಿ..
