6
September 29, 2026

Shiruru | ಸಂತ್ರಸ್ತರ ಪರ ಸ್ವಾಮೀಜಿ ಹೋರಾಟ: IRB ವಿರುದ್ಧ ಪ್ರಾಥಮಿಕ ಜಯ

ಶಿರೂರು ಗುಡ್ಡ (Shiruru) ಕುಸಿತ ದುರಂತಕ್ಕೆ ಕಾರಣವಾಗಿರುವ IRB ಕಂಪನಿಯ 8 ನಿರ್ದೇಶಕರನ್ನು ವಿಚಾರಣೆ ಮಾಡಲು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಜುಲೈ 16 ರಂದು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿದು 8 ಜನ ಸಾವನಪ್ಪಿದ್ದು, ಮೂವರ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಈ ಪ್ರಕರಣದಲ್ಲಿ  ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕತೆ ಕಾರಣ ಎಂಬುದು ಎಲ್ಲರ ದೂರು. ಅಗಲೀಕರಣದ ಗುತ್ತಿಗೆ ಪಡೆದ ಕಂಪನಿ ಅಮಾಯಕರ ಜೀವ ಬಲಿ ಪಡೆದಿರುವ ಬಗ್ಗೆ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೋರಾಟ ನಡೆಸಿದ್ದರು. ಅವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಇದರ ಜೊತೆ ಸಂತ್ರಸ್ತ ಕುಟುಂಬದವರನ್ನು ದೆಹಲಿಗೆ ಕರೆದೊಯ್ದು ಅಲ್ಲಿ ಹಲವರನ್ನು ಭೇಟಿ ಮಾಡಿಸಿದ್ದರು. ಸಂತ್ರಸ್ತರ ಸಮಸ್ಯೆ ಪರ ಸಾಕಷ್ಟು ಮಾತನಾಡಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನಲೆ ಅಂಕೋಲಾ ಜೆ ಎಂ ಎಫ್ ಸಿ ನ್ಯಾಯಾಲಯ ಸ್ವಾಮೀಜಿ ಪರ ಒಲವು ತೋರಿದೆ. IRB ವಿರುದ್ಧ ಪ್ರಕರಣ ದಾಖಲಿಸಿ ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ.

Leave a Reply

Your email address will not be published. Required fields are marked *

You cannot copy content of this page