ಯಲ್ಲಾಪುರ: ಕಳಚೆ ಮೂಲದ ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಈ ವರ್ಷದಿಂದ `ಸಹ್ಯಾದ್ರಿ ಕ್ಷೇಮನಿಧಿ’ ಎಂಬ ಯೋಜನೆ ಶುರು ಮಾಡಿದೆ. ಸಂಘದಲ್ಲಿ ವ್ಯವಹಾರ ನಡೆಸುವವರ ಅಕಾಲಿಕ ಮರಣ ಹಾಗೂ ಆಪತ್ಕಾಲದಲ್ಲಿ ಆರ್ಥಿಕ ಸಹಾಯ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಕನಿಷ್ಟ 25 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿಯವರೆಗೆ ಇಲ್ಲಿ ಆರ್ಥಿಕ ನೆರವು ಸಿಗುತ್ತದೆ.
ಕಳಚೆ ಹಾಗೂ ಭಾಗಿನಕಟ್ಟಾ ಈ ಸೊಸೈಟಿಯ ಕಾರ್ಯಕ್ಷೇತ್ರ. ಯಲ್ಲಾಪುರ ಸೇರಿ ವಿವಿಧ ಪ್ರದೇಶಗಳು ಸೊಸೈಟಿಯ ವ್ಯವಹಾರಿಕ ಕ್ಷೇತ್ರ. ಕಳೆದ ಎರಡು ವರ್ಷದ ಹಿಂದೆ ಅಡಿಕೆ ವಿಕ್ರಿ ವಹಿವಾಟು ಶುರು ಮಾಡಿದ ಈ ಸೊಸೈಟಿ 10 ಸಹಕಾರಿ ಸಂಘಗಳ ಸಹಕಾರದಿಂದ ಈ ಕಾರ್ಯವನ್ನು ಮುಂದುವರೆಸಿದೆ. ಜೊಯಿಡಾ, ಶಿರಸಿ, ಅಂಕೋಲಾದ ಕೆಲ ಸಹಕಾರಿ ಸಂಘಗಳೂ ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ಖಾತೆ ತೆರೆದಿವೆ. ಆಪತ್ಕಾಲದಲ್ಲಿ ನೆರವು ನೀಡುವ `ಸಹ್ಯಾದ್ರಿ ಕ್ಷೇಮನಿಧಿ’ ಉಪಯೋಗಕ್ಕೆ ಈ ಸಂಘದ ಮೂಲಕ ಅಡಿಕೆ ವಿಕ್ರಿ ಮಾಡುವುದು ಕಡ್ಡಾಯ.
`ಗ್ರಾಮೀಣ ಭಾಗದಲ್ಲಿ ಆರಂಭಗೊoಡು ಪಟ್ಟಣದಲ್ಲಿ ಶಾಖೆ ಹೊಂದಿದ ಈ ಸಂಘ ಉತ್ತಮ ಬೆಳವಣಿಗೆ ಸಾಧಿಸಿದ್ದು ಗುಣಮಟ್ಟದ ಸೇವೆ, ನಿಖರ ತೂಕ ಮತ್ತು ಸಿಬ್ಬಂದಿಯ ಆತ್ಮಿಯ ಒಡನಾಟದ ಕಾರಣ ಕಳೆದ 41.44 ಲಕ್ಷ ರೂ ಲಾಭ ಪಡೆದಿದೆ’ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಸುದ್ದಿಗಾರರಿಗೆ ತಿಳಿಸಿದರು. ಕಳೆದ ವರ್ಷ ಶೇ 8ರಷ್ಟು ಡಿವಿಡೆಂಟ್ ನೀಡಿದ್ದು, ಈ ವರ್ಷ ಸದಸ್ಯರ ಸಭೆ ನಡೆಸಿ ಡಿವಿಡೆಂಟ್ ಘೋಷಣೆ ನಡೆಯಲಿದೆ’ ಎಂದರು.
ಸoಘದ ಉಪಾಧ್ಯಕ್ಷ ರಾಘವೇಂದ್ರ ಕೋಣೆಮನೆ, ನಿರ್ದೇಶಕರಾದ ಶ್ರೀಕಾಂತ ಹೆಬ್ಬಾರ, ರಾಘವೇಂದ್ರ ಭಟ್ಟ, ಸೂರ್ಯನಾರಾಯಣ ಭಟ್ಟ, ರಾಮಕೃಷ್ಣ ಹೆಗಡೆ, ಶ್ರೀಪಾದ ಗಾಂವ್ಕರ, ಗಣಪತಿ ಗೌಡ, ಅರುಣ ನಾಯ್ಕ, ವಿನುತಾ ಗದ್ದೆ, ಮುಖ್ಯಕಾರ್ಯನಿರ್ವಾಹಕ ದತ್ತಾತ್ರೇಯ ಹೆಗಡೆ, ಶಾಖಾ ವ್ಯವಸ್ಥಾಪಕ ಅನಂತ ಹೆಗಡೆ ಇದ್ದರು.



