ಯಲ್ಲಾಪುರ: ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಕಾಳಮ್ಮನಗರದ ಶಿವಾನಂದ ನಾಯ್ಕ (86) ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.
ಬಿಜೆಪಿ ಕಾರ್ಯಕರ್ತರಾಗಿದ್ದ ಅವರು ಪಕ್ಷ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದರು. ಕಾಳಮ್ಮನಗರದ ದೇವಾಲಯ ಅಭಿವೃದ್ಧಿಗಾಗಿ ದುಡಿದಿದ್ದರು. ಇದಲ್ಲದೇ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಹ ತೊಡಗಿಸಿಕೊಂಡಿದ್ದರು. 1996ರ ಅವಧಿಯಲ್ಲಿ ರಾಮು ನಾಯ್ಕ ಅವರು ಪಟ್ಟಣ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿದ್ದಾಗ ಶಿವಾನಂದ ನಾಯ್ಕ ಅವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ನಿರಂತರ ಐದು ವರ್ಷಗಳ ಕಾಲ ಅವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಿವಿಧ ಕಡೆ ಅಭಿವೃದ್ಧಿ ಚಟುವಟಿಕೆ ನಡೆಸಿದ್ದರು.
ಕುಮಟಾದ ಕೋಡ್ಕಣಿ ಮೂಲದವರಾದ ಅವರು ಯಲ್ಲಾಪುರಕ್ಕೆ ಆಗಮಿಸಿ ಹಳ್ಳಿ ಹಳ್ಳಿ ತಿರುಗಾಟ ನಡೆಸಿದ್ದರು. ಅಡಿಕೆ, ಬಾಳೆಕಾಯಿ, ತೊಗರು ಸೇರಿ ವಿವಿಧ ಸಾಮಗ್ರಿಗಳನ್ನು ಗ್ರಾಮೀಣ ಭಾಗದವರಿಂದ ಖರಿದಿಸಿ ಅದನ್ನು ಪಟ್ಟಣಕ್ಕೆ ತಂದು ಮಾರಿ ಬದುಕು ಕಟ್ಟಿಕೊಂಡಿದ್ದರು. 90ರ ದಶಕದವರೆಗೂ ಅವರು ಹಳ್ಳಿ ತಿರುಗಾಟ ನಡೆಸಿದ್ದು, ನಂತರ ರಾಜಕೀಯ ಪ್ರವೇಶಿಸಿದ್ದರು. ಮೊದಲ ಅವಧಿಯಲ್ಲಿಯೇ ಪಟ್ಟಣದ ಬೆಳವಣಿಗೆಗೆ ಕೊಡುಗೆ ನೀಡಿದ್ದರು.
ಶಿವಾನಂದ ನಾಯ್ಕ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ



