ಅಂಕೋಲಾ: ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾದ ಜಗನ್ನಾಥ ನಾಯ್ಕ ಅವರ ಪುತ್ರಿ ಪಲ್ಲವಿ ಅವರಿಗೆ ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ತಾತ್ಕಾಲಿಕ ಉದ್ಯೋಗ ದೊರೆತಿದೆ.
ಕಾರವಾರದ ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ಅವರು ಕಂಪ್ಯುಟರ್ ಆಪರೇಟರ್ ಆಗಿ ಕೆಲಸಕ್ಕೆ ಸೇರಲು ಅವಕಾಶ ಸಿಕ್ಕಿದೆ. ಮಾಸಿಕ 17 ಸಾವಿರ ರೂ ವೇತನ ಅವರಿಗೆ ಸಿಗಲಿದ್ದು, ಅವರ ಕುಟುಂಬ ನಿರ್ವಹಣೆಗೆ ಈ ಕೆಲಸ ನೆರವಾಗಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ ನೇಮಕಾತಿ ಆದೇಶವನ್ನು ಸಚಿವ ಮಂಕಾಳು ವೈದ್ಯ ವಿತರಿಸಿದರು.
ಗಮನ ಸೆಳೆದ ಸಿದ್ದಿ ಪರಿವಾರ ನಾಟಕ
ದಾಂಡೇಲಿ: ಅಸ್ಪೃಶ್ಯತೆ ನಿವಾರಣೆ ಕುರಿತು ನಡೆದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಸಿದ್ಧಿ ಬುಡಕಟ್ಟು ಸಮುದಾಯದ ಅಮ್ಚೆಮೊಳ್ ಕಲಾ ತಂಡದವರ ಬೀದಿ ನಾಟಕ ಗಮನ ಸೆಳೆಯಿತು. ಬೀದಿ ನಾಟಕದಲ್ಲಿ ಸರ್ಕಾರ ಜಾರಿಗೆ ತಂದ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಯಿತು.
ಉರ್ದು ಶಾಲೆಗೆ ವೀರಾಗ್ರಣಿ

ಕುಮಟಾ: ಬಂಗಣೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಂತೇಗುಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಂತೇಗುಳಿ ಕೆಪಿಎಸ್ ಉರ್ದು ಶಾಲೆಯ ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.
ವಿವಿಧ ಸ್ಪರ್ಧೆಗಳಲ್ಲಿ 15 ವಿದ್ಯಾರ್ಥಿಗಳು ಭಾಗವಹಿಸಿದ್ದು 10 ವಿದ್ಯಾರ್ಥಿಗಳು ಪ್ರಥಮ, ಒಬ್ಬರು ದ್ವಿತೀಯ, ಇಬ್ಬರು ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು.
ಸರಸ್ವತಿ ಮಂದಿರದಲ್ಲಿ ಕೊಂಕಣಿ ದಿವಸ

ಕಾರವಾರ: ಸರಸ್ವತಿ ವಿದ್ಯಾಲಯದಲ್ಲಿ ನಡೆದ ಕೊಂಕಣಿ ಮಾನ್ಯತಾ ದಿವಸ ಕಾರ್ಯಕ್ರಮವನ್ನು ವಿಧಾನ ಪರಷತ್ ಸದಸ್ಯ ಎಸ್.ವಿ ಸಂಕನೂರ ಉದ್ಘಾಟಿಸಿದರು.
`ಕೊಂಕಣಿ ಭಾಷೆಯ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಶ್ರೀಮಂತಗೊಳಿಸುವುದು ಪೀಠದ ಮುಖ್ಯ ಉದ್ದೇಶವಾಗಿದ್ದು, ಕೊಂಕಣಿ ಸಾಹಿತ್ಯವು ದೇಶದ ಐಕ್ಯತೆ ಹಾಗೂ ಸಹಭಾಳ್ವೆಯ ಸಂದೇಶ ನೀಡುತ್ತದೆ’ ಎಂದವರು ಹೇಳಿದರು. ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಉದಯ ರಾಯ್ಕರ, ಅಶೋಕ ಕುಡತರಕರ ಇದ್ದರು. ಹಲವು ಸಾಧಕರಿಗೆ ಸನ್ಮಾನಿಸಲಾಯಿತು.
S News Digitel
ಶಿಕ್ಷಕರ ಸೇವೆ ಶ್ಲಾಘಿಸಿದ ಶಾಸಕ ಶಿವರಾಮ

ಯಲ್ಲಾಪುರ: `ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಮಾಜದಲ್ಲಿ ಹೆಚ್ಚಿನ ಮಹತ್ವವಿದ್ದು, ಶಿಕ್ಷಣದಲ್ಲಿ ಲೋಪವಾದರೆ ಮಕ್ಕಳ ಭವಿಷ್ಯವೇ ನಾಶವಾಗುತ್ತದೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು `ಯಶಸ್ವಿ ಪ್ರಜೆಯನ್ನು ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ. ಪುಣ್ಯವಂತರಿಗೆ ಮಾತ್ರ ಶಿಕ್ಷಕರಾಗಿ ಸೇವೆ ಸಲ್ಲಿಸುವ ಅವಕಾಶ ಸಿಗುತ್ತದೆ. ಎಲ್ಲಾ ಶಿಕ್ಷಕರು ಅವರವರ ಗೌರವ, ಘನತೆ ಕಾಪಾಡಿಕೊಳ್ಳಬೇಕು’ ಎಂದರು.
ಸoಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ `ಮಕ್ಕಳ ಭವಿಷ್ಯದ ಬಗ್ಗೆ ಶಿಕ್ಷಕರಿಗೆ ಕಾಳಜಿಯಿರಬೇಕು’ ಎಂದರು. ತಹಶೀಲ್ದಾರ ಅಶೋಕ ಭಟ್ಟ ಮಾತನಾಡಿ `ಯಲ್ಲಾಪುರ ತಾಲೂಕಿನ ಶಿಕ್ಷಕರ ತಂಡ ಪ್ರಜ್ಞಾವಂತರಿAದ ಕೂಡಿದೆ. ಮಕ್ಕಳ ಬದುಕಿಗೆ ಬೆಳಕು ನೀಡಲು ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ’ ಎಂದರು.
ಪ.ಪo ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕರಾದ ಸುರೇಶ ನಾಯ್ಕ, ಶ್ರೀಕಾಂತ ವೈದ್ಯ, ಗಾಯತ್ರಿ ಗದ್ದೆಮನೆ, ಪ್ರೌಢ ವಿಭಾಗದಲ್ಲಿ ವೀರಭದ್ರ ಭಟ್ಟ, ಡಾ.ನವೀನಕುಮಾರ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು. 24 ನಿವೃತ್ತ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ.ಪಂ. ಉಪಾಧ್ಯಕ್ಷ ಅಮಿತ ಅಂಗಡಿ, ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ನಾರ್ವೇಕರ, ಭಾರತ ಸೇವಾದಳದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್ಟ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸಂತೋಷ ಜಿಗಳೂರು, ಅಕ್ಷರ ದಾಸೋಹ ಮುಖ್ಯಸ್ಥ ಶ್ರೀರಾಮ ಹೆಗಡೆ, ಸಹಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ ಸಿ.ಎಸ್ ಇದ್ದರು.
ಸುಜಯ ಧುರಂದರ ಪ್ರಾರ್ಥಿಸಿದರು. ಶಿಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಸ್ವಾಗತಿಸಿದರು. ಶಿಕ್ಷಕರಾದ ಚಂದ್ರಹಾಸ ನಾಯ್ಕ, ಭಾಸ್ಕ ನಾಯ್ಕ, ಸುಮಂಗಲಾ ಭಟ್ಟ ನಿರ್ವಹಿಸಿದರು.
ನಿವೃತ್ತ ಶಿಕ್ಷಕರಿಗೆ ಸನ್ಮಾನ
ಕಾರವಾರ: `ವಿದ್ಯೆ ಕಲಿಸುವುದಷ್ಟೇ ಶಿಕ್ಷಣದ ಉದ್ದೇಶ ಅಲ್ಲ. ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸುವುದೂ ಶಿಕ್ಷಣದ ಗುರಿ. ಪ್ರತಿಯೊಬ್ಬರೂ ಉನ್ನತ ಸ್ಥಾನ ಪಡೆಯುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು’ ಎಂದು ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ ಹೇಳಿದರು.
ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು, `ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದರ ಜತೆಗೆ ಸರಿ ತಪ್ಪುಗಳನ್ನು ತಿದ್ದುವ, ಅವರಲ್ಲಿನ ಆಸಕ್ತಿಗಳನ್ನು ವೃದ್ಧಿಸುವ ಮತ್ತು ಅವರ ಬದುಕಿಗೆ ಗುರಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ದೊಡಡ್ದು’ ಎಂದರು.
ಸಿದ್ದರದ ಮಲ್ಲಿಕಾರ್ಜುನ ಪ.ಪೂ ಕಾಲೇಜ್‌ನ ನಿವೃತ್ತ ಪ್ರಾಚಾರ್ಯರಾದ ಜಿ. ಡಿ. ಮನೋಜ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರು ಎದುರಿಸುವ ಸವಾಲುಗಳು ಕುರಿತು ಉಪನ್ಯಾಸ ನೀಡಿದರು. ಸಾಯಿ ಅನ್ನಪೂರ್ಣ ಟ್ರಸ್ಟ್ ಸಂಚಾಲಕ, ಉಪ ಸಮನ್ವಯ ಅಧಿಕಾರಿ ಭಾಸ್ಕರ್ ಗಾವಂಕರ್, ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಉಪಸಮನ್ವಯ ಅಧಿಕಾರಿ ನಾಗರಾಜ ಗೌಡ, ಅಂಕೋಲಾದ ಅರ್ಬನ ಕೋ-ಅಪರೇಟಿವ್ ಬ್ಯಾಂಕ ಉಪಾಧ್ಯಕ್ಷ ಗೋವಿಂದ್ರಾಯ ಕೃಷ್ಣ ನಾಯ್ಕ, ಡಯಟ್ ಕುಮಟಾದ ಉಪನ್ಯಾಸಕರ ಸುರೇಶ್ ಗಾವಂಕರ್, ಮಾಧ್ಯಮಿಕ ಶಾಲಾ ಶಿಕ್ಷಣ ಸಂಘದ ಅಧ್ಯಕ್ಷ ಜೈ ಮಂಜುನಾಥ, ಪ್ರಾಥಮಿಕ ಶಾಲಾ, ಶಿಕ್ಷಣ ಸಂಘದ ಅಧ್ಯಕ್ಷ ಆರ್.ಪಿ ಗೌಡ, ಕೆನರ ಬ್ಯಾಂಕ್ ಮ್ಯಾನೇಜರ್ ರಾಹುಲ್ ಸಾವಂತ್, ಮುಖ್ಯೋಪಾಧ್ಯಕ ಪ್ರಭಾಕರ್ ಚಿತ್ರಾಮನೆ ಹಾಗೂ ಮತ್ತಿತರರು ಇದ್ದರು.
ಕ್ಷೇತ್ರ ಶಿಕ್ಷಣಾದಿಕಾರಿ ಚಂದ್ರಹಾಸ ರಾಯ್ಕರ್ ಸ್ವಾಗತಿಸಿದರು. ಶಿಕ್ಷಕಿಯರಾದ ವನೀತಾ ಶೇಟ್ ಮತ್ತು ಗಂಗಾ ಭಟ್ ನಿರೂಪಿಸಿದರು. ದೈಹಿಕ ಶಿಕ್ಷಣ ಪರೀವಿಕ್ಷಕರು ವಿಠೋಬ್ ನಾಯ್ಕ ವಂದಿಸಿದರು.
`ಗುರಿ ಜೊತೆ ಗುರು ಇದ್ದರೆ ಯಶಸ್ಸು ನಿಶ್ಚಿತ’

ಯಲ್ಲಾಪುರ: `ಸ್ಪಷ್ಟ ಗುರಿ ಜೊತೆ ಉತ್ತಮ ಗುರುವಿನ ಮಾರ್ಗದರ್ಶನ ದೊರೆತರೆ ಯಶಸ್ಸು ಸಾಧ್ಯ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ಧನ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು `ತಂತ್ರಜ್ಞಾನ ಯುಗದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಜೀವನ ರೂಪಿಸಲು ನಿರಂತರ ಪ್ರಯತ್ನ ನಡೆಸಬೇಕು’ ಎಂದು ಕರೆ ನೀಡಿದರು.
ನಿವೃತ್ತ ಶೀಕ್ಷಕ ಗೋಪಾಲಕೃಷ್ಣ ತಾಂಡುರಾಯನ್ ಹಾಗೂ ಯೋಗಪ್ಪ ಎಸ್. ಗೋಕುಲ ಅವರನ್ನು ಸನ್ಮಾನಿಸಿದರು
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಶರತ್ ಕುಮಾರ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸುರೇಖಾ ಎಸ್ ತಡವಲ ಮತ್ತು ಸವಿತಾ ನಾಯ್ಕ ಇದ್ದರು. ವೇದಾ ಭಟ್ಟ ಸ್ವಾಗತಿಸಿದರು. ನಂದಿತಾ ಭಾಗ್ವತ್ ನಿರ್ವಹಿಸಿದರು. ದಿನೇಶ ನಾಯ್ಕ ವಂದಿಸಿದರು.
ಅಳ್ಳಂಕಿಯಲ್ಲಿ ಸಿರಿ ಉತ್ಪನ್ನ ಮಾರಾಟ ಮಳಿಗೆ

ಹೊನ್ನಾವರ: ಅಳ್ಳಂಕಿ ಸಮೀಪ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಮಳಿಗೆಯನ್ನು ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ವಾಸಂತಿ ಅಮಿನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು `ಮಹಿಳೆಯರೇ ಉತ್ಪಾದಿಸಿದ ವಸ್ತುಗಳು ಈ ಮಳಿಗೆಯಲ್ಲಿ ದೊರೆಯಲಿದೆ. ಆರೋಗ್ಯ ವರ್ಧನೆಗೆ ಸಿರಿಧಾನ್ಯವನ್ನು ಬಳಸಿ’ ಎಂದರು. ಸಿರಿಧಾನ್ಯ ಜಿಲ್ಲಾ ವಿತರಕರಾದ ನಾಗರಾಜ ನಾಯ್ಕ ಮಾತನಾಡಿ `ಸಿರಿಧಾನ್ಯದ ಮಾರಾಟ ಆರೋಗ್ಯಯುತ ಸಮಾಜದ ನಿರ್ಮಾಣದ ಉದ್ದೇಶ ಹೊಂದಿದೆ’ ಎಂದರು. ಗ್ರಾ.ಪಂ. ಸದಸ್ಯ ವಿನಾಯಕ ನಾಯ್ಕ ಇದ್ದರು.
S News Digitel





