ಕಾರವಾರ: `ಉತ್ತಮ ಶಿಕ್ಷಕರು, ಸುಸಜ್ಜಿತ ಕಲಿಕಾ ವ್ಯವಸ್ಥೆಯ ಕಾರಣದಿಂದ ಕಂಪ್ಯುಟರ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯ ಸಾಧನೆ ಸಾಧ್ಯವಾಯಿತು’ ಎಂದು ಕಾರವಾರದ ದಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ ವಿದ್ಯಾರ್ಥಿ ಅಜ್ಜಯ್ಯ ಶಿವರುದ್ರಯ್ಯ ಹಿರೇಮಠ ಹೇಳಿದ್ದಾರೆ.
ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಕಂಪ್ಯೂಟರ್ ಆಫೀಸ್ ಅಟೊಮೇಷನ್ ಅಜ್ಜಯ್ಯ ಅವರು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 2024ನೇ ಸಾಲಿನ ಅಗಸ್ಟ ತಿಂಗಳಿನಲ್ಲಿ ನಡೆದ ಕಂಪ್ಯುಟರ್ ಪರೀಕ್ಷೆಯನ್ನು ಅವರು ಎದುರಿಸಿದ್ದರು. ಕಾರವಾರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಓದಿದ ಅವರು ನಂತರ ಕಾರವಾರದ ದಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಗೆ ಸೇರಿ 6 ತಿಂಗಳ ಕಂಪ್ಯುಟರ್ ತರಬೇತಿ ಪಡೆದಿದ್ದರು.
`ಅಲ್ಲಿ ಕಲಿತ ವಿದ್ಯೆಯಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದವರು ಶಿಕ್ಷಕ ವರ್ಗದವರನ್ನು ಸ್ಮರಿಸಿದರು. ಅಜ್ಜಯ್ಯ ಅವರು ಅತ್ಯುನ್ನತ ಶ್ರೇಣಿಯಲ್ಲಿ ಸಾಧನೆ ಮಾಡಿದಕ್ಕಾಗಿ ಸಂಸ್ಥೆ ಪ್ರಾಚಾರ್ಯ ಪ್ರಸನ್ನ ತೆಂಡೂಲ್ಕರ್ ಸಂತಸ ವ್ಯಕ್ತಪಡಿಸಿದರು.



