6

ಸಾರಿಗೆ ನೌಕರರಿಗೆ ಡಿಜಿಟಲ್ ಪಾಠ: ಈ ಕೆಲಸದಿಂದ KSRTC 7.50 ಲಕ್ಷ ರೂ ಉಳಿಕೆ!

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ವೇತನ ಪಾವತಿಸಿದ ನಂತರ ವೇತನ ಪಾವತಿಸಿದನ್ನು ಖಚಿತಪಡಿಸಲು ನೀಡುವ `ಸ್ಯಾಲರಿ ಸ್ಲಿಪ್’ನ್ನು ಆನ್ಲೈನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಿದ್ದು, ಮುದ್ರಣ ಚೀಟಿ ನೀಡುವುದಕ್ಕೆ ವಿದಾಯ ಹೇಳಿದ ಪರಿಣಾಮ ವಾರ್ಷಿಕ 7.50 ಲಕ್ಷ ರೂ ಲೇಖನ ಸಾಮಗ್ರಿ ಖರೀದಿ ವೆಚ್ಚದಿಂದಲೇ ನಿಗಮಕ್ಕೆ ಉಳಿತಾಯವಾಗಲಿದೆ.

ಮೊದಲು ಈ ವೇತನ ಚೀಟಿ ಮುದ್ರಿಸಲು ಅಗತ್ಯವಿರುವ ಕಾಗದವನ್ನು ಬೆಂಗಳೂರು ಪ್ರೆಸ್’ನಿಂದ ತರಿಸಲಾಗತ್ತಿತ್ತು. ಕೇಂದ್ರ, ವಿಭಾಗ ಕಚೇರಿಗಳಲ್ಲಿ ಚೀಟಿ ಮುದ್ರಿಸಿ ಸಂಸ್ಥೆ ಅಧಿಕಾರಿ-ಸಿಬ್ಬಂದಿಗೆ ನೀಡಲಾಗುತ್ತಿತ್ತು. 2024ರ ಅಗಸ್ಟಿನಿಂದ ಮುದ್ರಿತ ಚೀಟಿ ನೀಡುವುದನ್ನು ನಿಲ್ಲಿಸಲಾಗಿದ್ದು, ಚೀಟಿ ಅಗತ್ಯವಿರುವವರು ಆನ್ಲೈನ್ ಮೂಲಕ ಪಡೆಯಲು ಸೂಚಿಸಲಾಗಿತ್ತು. ಸಂಸ್ಥೆಯಲ್ಲಿ ದುಡಿಯುವ 20768 ನೌಕರರಿಗೆ ಆನ್ಲೈನ್ ಮೂಲಕ ವೇತನ ಚೀಟಿ ನೀಡುತ್ತಿರುವುದರಿಂದ 7.50 ಲಕ್ಷ ರೂ ಉಳಿಕೆಯಾಗಲಿದೆ. ಇದಲ್ಲದೇ ಚೀಟಿ ಮುದ್ರಿಸುವ, ಪ್ರತಿಯೊಬ್ಬರಿಗೂ ಅದನ್ನು ವಿತರಿಸುವ ಮಾನವ ಶ್ರಮವನ್ನು ಬೇರೆ ಕಡೆ ಬಳಸಿಕೊಳ್ಳುವ ಅವಕಾಶ ಸಿಕ್ಕಿದೆ.

 

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    You cannot copy content of this page