ಗಣಪತಿ ಮೂರ್ತಿ ಮುಂದೆ ಇರಿಸಿದ ದುಡ್ಡಿಗಾಗಿ ಸಹೋದರರ ನಡುವೆ ಹೊಡೆದಾಟ ನಡೆದಿದ್ದು, ಈ ಹೊಡೆದಾಟದಲ್ಲಿ ಸಂದೇಶ ಪ್ರಭಾಕರ್ ಬೋರ್ಕರ್ ಎಂಬಾತರು ಸಾವನಪ್ಪಿದ್ದಾರೆ.
ಕಾರವಾರದ ಸಾಯಿಕಟ್ಟಾದ ಬಿಂದು ಮಾಧವ ದೇವಸ್ಥಾನದ ಬಳಿ ಮನೆಯೊಂದರಲ್ಲಿ ಗಣಪತಿ ಮೂರ್ತಿ ಕೂರಿಸಲಾಗಿತ್ತು. ಗಣಪತಿ ಮೂರ್ತಿ ಪೂಜೆ ಹಾಗೂ ಮೂರ್ತಿ ಮುಂದಿರಿಸಿದ ದುಡ್ಡಿನ ವಿಷಯವಾಗಿ ಸಂದೇಶ ಪ್ರಭಾಕರ ಬೋರ್ಕರ್ ಹಾಗೂ ಅವರ ಚಿಕ್ಕಪ್ಪನ ಮಗ ಮನೀಷ್ ಕಿರಣ ಬೋರ್ಕರ್ ನಡುವೆ ಮೊದಲು ಜಗಳ ಶುರುವಾಗಿತ್ತು. ಮನೋಹರ್ ಬೋರ್ಕರ್ ಎಂಬಾತರು ಜಗಳು ಬಗೆಹರಿಸಿ ಗಣಪತಿ ಪೂಜೆ ಮಾಡಿದ್ದರು.
ಪೂಜೆ ಮುಗಿದ ನಂತರ ಗಣಪತಿ ಮುಂದೆ ಇರಿಸಿದ ದುಡ್ಡಿನ ವಿಷಯವಾಗಿ ಮತ್ತೆ ಜಗಳ ನಡೆದಿದ್ದು, ಈ ಜಗಳ ಹೊಡೆದಾಟಕ್ಕೆ ಕಾರಣವಾಯಿತು. ಈ ಹೊಡೆದಾಟದಲ್ಲಿ ಮನೀಷ್ ಬೋರ್ಕರ್ ಎಂಬಾತ ಸಂದೇಶ ಬೋರ್ಕರ್’ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಗಾಯಗೊಂಡ ಸಂದೇಶ ಬೋರ್ಕರನ್ನು ಆಸ್ಪತ್ರೆಗೆ ಕರೆದೆಯ್ದು ಚಿಕಿತ್ಸೆ ಕೊಡಿಸುವ ಕೆಲಸ ನಡೆಯಿತು. ಆದರೂ, ಪ್ರಯೋಜನವಾಗಲಿಲ್ಲ. ಇದೀಗ ಪೊಲೀಸರು ಸ್ಥಳಕ್ಕೆ ತೆರಳಿ ಮನೀಷ್ ಬೋರ್ಕರ್’ನನ್ನು ಬಂಧಿಸಿದ್ದಾರೆ. ಆತನ ಜೊತೆಗಿದ್ದವರನ್ನು ಸಹ ವಿಚಾರಣೆಗೆ ಒಳಪಡಿಸಿದ್ದಾರೆ.