ಅಂಕೋಲಾ: ಶಿಲ್ಪ ಕೆತ್ತನೆಗಾಗಿ ಊರುರು ಅಲೆಯುತ್ತಿದ್ದ ಉಡುಪಿ ಮೂಲದ ವೆಂಕಟೇಶ ರಾಜು ಪೂಜಾರಿ (55) ಎಂಬಾತರು ಬಾಳೆಗುಳಿ ಕ್ರಾಸಿನ ಚಹದ ಅಂಗಡಿ ಬಳಿ ಸಾವನಪ್ಪಿದ್ದಾರೆ.
ಕಳೆದ 20 ವರ್ಷಗಳಿಂದ ಅವರು ಮೂರ್ತಿ ಕೆತ್ತನೆ ಮಾಡುತ್ತಿದ್ದರು. ಈ ಕೆಲಸಕ್ಕಾಗಿ ಅವರು ಹೆಂಡತಿ ಮಕ್ಕಳಿಂದ ದೂರವಾಗಿದ್ದರು. ಶಿಲ್ಪ ಕೆತ್ತನೆಯಿಂದ ದೊರೆತ ಹಣವನ್ನು ಮದ್ಯ ಸೇವನೆಗೆ ಬಳಸುತ್ತಿದ್ದು, ರಾತ್ರಿ ಆದಲ್ಲಿ ಎಲ್ಲೆಂದರಲ್ಲಿ ಮಲಗಿ ಬೆಳಗು ಮಾಡುತ್ತಿದ್ದರು. ಸೆಪ್ಟೆಂಬರ್ 6ರಂದು ಶಿಲ್ಪ ಕೆತ್ತನೆಗಾಗಿ ಅಂಕೋಲಾಗೆ ಆಗಮಿಸಿದ ಅವರು ಅಲ್ಲಿಂದ ಮುಂದೆ ಬೇರೆ ಊರಿಗೆ ಹೋಗುವವರಿದ್ದರು. ರಾತ್ರಿ ಆದ ಕಾರಣ ಬಾಳೆಗುಳಿಯ ಚಹದ ಅಂಗಡಿ ಬಳಿ ತೆರಳಿ ಅಲ್ಲಿ ಮಲಗಿದ್ದರು. ಬೆಳಗ್ಗೆ 8 ಗಂಟೆಯ ವೇಳೆಗೆ ಅವರಿಗೆ ಜೀವವಿರಲಿಲ್ಲ.
ಉಡುಪಿ ಬ್ರಹ್ಮಾವರದ ಬಳಿಯ ಪಾಂಡೇಶ್ವರ ಗ್ರಾಮ ಸಸ್ಥಾನದಿಂದ ಆಗಮಿಸಿದ ಅವರ ಪುತ್ರಿ ಶೃದ್ಧಾ ವೆಂಕಟೇಶ ಪೂಜಾರಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೈಕಿಗೆ ಗುದ್ದಿದ ಕಾರು ಚಾಲಕ
ಹೊನ್ನಾವರ: ಗಾಂಧಿ ನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡುವ ಘನಶ್ಯಾಮ ಗೋಪಾಲ ಮೇಸ್ತ ಅವರ ಬೈಕಿಗೆ ಶಿರಸಿ ವಾನಳ್ಳಿಯ ಗುರುಪ್ರಸಾದ ಮಾಧವ ಬಾಳಗಿ ಎಂಬಾತರ ಕಾರು ಗುದ್ದಿದೆ.
ಸೆಪ್ಟಂಬರ್ 7ರಂದು ಶರಾವತಿ ಸರ್ಕಲಿನಿಂದ ಗಾಂಧಿನಗರ ಕಡೆ ಘನಶ್ಯಾಮ ಮೇಸ್ತಾ ಬೈಕಿನಲ್ಲಿ ಹೊರಟಿದ್ದರು. ಕೆಳಗಿನ ಇಡಗುಂಜಿಯ ರಾಮಚಂದ್ರ ಪರಮೇಶ್ವರ ಪಂಡಿತ ಸಹ ಅದೇ ಬೈಕಿನಲ್ಲಿ ಹಿಂದೆ ಕುಳಿತಿದ್ದರು. ಗೇರುಸೊಪ್ಪಾ ತಿರುವಿನಲ್ಲಿ ಬೈಕಿಗೆ ಇಂಡಿಕೇಟರ್ ಹಾಕಿದ ಘನಶ್ಯಾಮ್ ಬಲಕ್ಕೆ ತಿರುಗುವ ಸೂಚನೆ ನೀಡಿದ್ದರು.
ಆದರೆ, ಕುಮಟಾದಿಂದ ಭಟ್ಕಳಕ್ಕೆ ವೇಗವಾಗಿ ಹೋಗುತ್ತಿದ್ದ ಕಾರು ಚಾಲಕ ಗುರುಪ್ರಸಾದ ಬೈಕ್ ಚಾಲಕ ಸಿಗ್ನಲ್ ನೀಡಿರುವುದನ್ನು ಗಮನಿಸದೇ ಬೈಕ್ ಸವಾರರಿಗೆ ಗುದ್ದಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
S News Digitel