ದಾಂಡೇಲಿ: ಬಸ್ ನಿಲ್ದಾಣ ಮುಂದಿನ ಜೆ ಎನ್ ರಸ್ತೆಯಲ್ಲಿ ಬೇಲಿ ನಿರ್ಮಿಸುತ್ತಿದ್ದ ಸುಧಾ ಪ್ರದೀಪ ನಟೇಶ್ ಎಂಬಾತರೊoದಿಗೆ ಅವರ ಭೂಮಿ ಪಕ್ಕದ ಲಾಡ್ಜಿನ ಮಾಲಕ ಅಸ್ಲಾಂ ಜಗಳ ಮಾಡಿದ್ದು, ಇದೇ ವಿಷಯವಾಗಿ ಇಬ್ಬರ ನಡುವೆ ಹೊಡೆದಾಟ ನಡೆದಿದೆ.
ಈ ವಿಷಯಕ್ಕೆ ಸಂಬoಧಿಸಿ ಸುಧಾ ಅವರು ಪೊಲೀಸ್ ದೂರು ದಾಖಲಿಸಿದ್ದು, `ತನ್ನ ಮೇಲೆ ಅನಗತ್ಯ ಹಲ್ಲೆ ನಡೆದಿದೆ’ ಎಂದು ದೂರಿದ್ದಾರೆ. ಭಾನುವಾರ ಸುಧಾ ಅವರು ತಮ್ಮ ಜಾಗಕ್ಕೆ ಸ್ವಂತ ಹಣದಲ್ಲಿ ಕಂಬ ಹಾಕಿ ಬೇಲಿ ನಿರ್ಮಿಸುತ್ತಿದ್ದರು. ಆಗ ಅಲ್ಲಿಗೆ ಬಂದ ಲಾಡ್ಜ ಮಾಲಕ ಅಸ್ಲಾಂ ನೀರಲಗಿ ಬೇಲಿ ಹಾಕುವುದಕ್ಕೆ ವಿರೋಧಿಸಿದರು. ಇದೇ ವಿಷಯ ವಾಗ್ವಾದ-ಜಗಳಕ್ಕೆ ಕಾರಣವಾಗಿದೆ.
ಈ ವೇಳೆ ಸುಧಾ ಮೇಲೆ ಕೈ ಮಾಡಿದ ಅಸ್ಲಾಂ ಮಹಿಳೆಯ ಕತ್ತಿನಲ್ಲಿದ್ದ ಸರ ಎಳೆದಿದ್ದಾರೆ. ಬಟ್ಟೆಯನ್ನು ಹರಿದಿದ್ದಾರೆ. ಆಗ ಸುಧಾ ಸಹ ಆತನನ್ನು ಹಿಡಿದು ಎಳೆದಾಡಿದ ಫೊಟೋ ವೈರಲ್ ಆಗಿದೆ. ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದಾರೆ.