ಶಿರಸಿ: ಕಳೆದ 10 ವರ್ಷಗಳಿಂದ ಮಂಡಿನೋವಿನಿoದ ಬಳಲುತ್ತಿದ್ದ ನಾಗೇಶ ಜಟ್ಟಿ ಬೋವಿ (75) ಎಂಬಾತರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊಸ ಬಸ್ ನಿಲ್ದಾಣ ಬಳಿಯ ರಾಮನಗರದಲ್ಲಿ ವಾಸವಾಗಿದ್ದ ಅವರು ಮಂಡಿನೋವು ಹಾಗೂ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಅನಾರೋಗ್ಯದಿಂದ ಮಾನಸಿಕವಾಗಿ ಕುಗ್ಗಿದ ಅವರು ಸೆ 8ರಂದು ತಮ್ಮ ಮನೆಯ ಅಡುಗೆ ಕೋಣೆಗೆ ಹೋಗಿ ಅಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಡುಗೆ ಮನೆಯಲ್ಲಿನ ಪಕಾಶಿಗೆ ಹಗ್ಗದಿಂದ ಬಿಗಿದುಕೊಂಡು ಸಾವನಪ್ಪಿದ್ದ ಅವರನ್ನು ಬಸ್ ನಿಲ್ದಾಣದ ಬಳಿ ವಿಕಾಶ ಬ್ಯಾಗ್ ಹೊಲಿಯುವ ಶ್ರೀಪಾದ ನಾಗೇಶ ಪಟಗಾರ್ ನೋಡಿ, ಪೊಲೀಸರಿಗೆ ಮಾಹಿತಿ ನೀಡಿದರು.