ಉತ್ತರ ಕನ್ನಡ ಜಿಲ್ಲೆಯು ಒಂದು ರೀತಿಯ ವಿಶಿಷ್ಟವಾದದ್ದು. ಇಲ್ಲಿ ಕರಾವಳಿ, ಮಲೆನಾಡು, ಬಯಲುಸೀಮೆ ಪ್ರದೇಶಗಳನ್ನು ಹೊಂದಿದ್ದು, ಆಯಾ ವಾತಾವರಣಕ್ಕೆ ತಕ್ಕಂತೆ ಗಿಡಗಳು ಬೆಳೆಯುತ್ತಿವೆ. ಕರಾವಳಿ ಭಾಗದಲ್ಲಿ ಕುರುಚಲು ಕಾಡುಗಳು ಕೂಡ ಸಾಕಷ್ಟಿವೆ. ಹೀಗಾಗಿ ಇಂಥ ಕಾಡುಗಳಲ್ಲಿ ವಿಶಿಷ್ಟವಾದ ಗಿಡಗಳು ಮನಮೋಹಕವಾದ ಹೂಗಳು ಆಯಾ ಸನ್ನಿವೇಶದಲ್ಲಿ ಹೊರಬರುತ್ತವೆ.
ಹೂವು, ಹಣ್ಣು ಇವು ಆರೋಗ್ಯದ ಅವಿಭಾಜ್ಯ ಅಂಗಗಳಾಗಿದ್ದು, ಇದನ್ನು ತಿಳಿದುಕೊಂಡವರಿಗೆ ಮಾತ್ರ ಉಪಯೋಗಿಸಲು ಸಾಧ್ಯ. ಇಲ್ಲದಿದ್ದರೆ ನೋಡುವುದಕ್ಕೆ ಮಾತ್ರ ಸೀಮಿತವಾಗಿ ನಂತರದ ದಿನಗಳಲ್ಲಿ ಅದು ಮುದುಡಿಹೋಗುತ್ತದೆ. ಅಂಕೋಲಾ ತಾಲೂಕಿನಲ್ಲಿ ಒಂದೆಡೆ ಕುರುಚಲು ಕಾಡುಗಳಿದ್ದರೆ, ಇನ್ನೊಂದೆಡೆ ದಟ್ಟಾರಣ್ಯವಿದೆ.
ಹೀಗೆ ವಿಶೇಷ ಎನಿಸುವ ಗಿಡಗಳು ಹೂ ಬಿಟ್ಟು ಜನರನ್ನು ಆಕರ್ಷಿಸುತ್ತವೆ. ಆದರೆ ಅವುಗಳ ಮಹತ್ವ ಅರಿಯದೇ ಎಲ್ಲರೊಂದಿಗೂ ಸಾಧ್ಯವಾಗುತ್ತಿಲ್ಲ. ಕಾಡಂಚಿನ ಕುಟುಂಬಗಳು ಮಾತ್ರ ಒಂದಿಷ್ಟು ಪ್ರಮಾಣದಲ್ಲಿ ಇದನ್ನು ಬಳಕೆ ಮಾಡಿಕೊಳ್ಳುತ್ತಾರೆ. ಉಳಿದವುಗಳು ಸಹಜವಾಗಿಯೇ ನಾಶಗೊಳ್ಳುತ್ತವೆ.
– ಟಿ ಶಿವಕುಮಾರ