ಕುಮಟಾ: ಅರೆಬರೆ ಕಾಮಗಾರಿಯ ಲಿಪ್ಟ ಬಳಸಿದ ಪರಿಣಾಮ ಗೋಪಾಲ ಸಿಂಗ್ ಇಂದೋ (24) ಎಂಬಾತರು ಅದೇ ಲಿಪ್ಟಿನಲ್ಲಿ ಸಿಲುಕಿ ಸಾವನಪ್ಪಿದ್ದಾರೆ.
ಜಗದಾಂಬಾ ಎಲೆಕ್ಟ್ರಿಕಲ್ಸ್’ನಲ್ಲಿ ಕೆಲಸಕ್ಕಿದ್ದ ಗೋಪಾಲ ಸಿಂಗ್ ಬುಧವಾರ ಬೆಳಗ್ಗೆ ಗ್ರಾಹಕರಿಗೆ ಅಗತ್ಯವಿರುವ ಸಾಮಗ್ರಿ ತರಲು ಮೆಟ್ಟಿಲುಗಳನ್ನು ಏರಿ ಕಟ್ಟಡದ ಮೇಲ್ಬಾಗಕ್ಕೆ ತೆರಳಿದ್ದರು. ಸಾಮಗ್ರಿಯನ್ನು ಹಿಡಿದು ಮರಳುವಾಗ ಲಿಪ್ಟ್ ಬಳಸಿದ್ದರು. ಲಿಪ್ಟ ಕೆಲಸ ಪೂರ್ಣಗೊಳ್ಳದ ಹಿನ್ನಲೆ ಅದು ಅಪಾಯದ ಪರಿಸ್ಥಿತಿಯಲ್ಲಿದ್ದು, ಗೋಪಾಲ ಸಿಂಗ್ ಅವರ ಎದೆಗೆ ಲಿಪ್ಟ್ ಬಡಿದು ಅವರು ಸಾವನಪ್ಪಿದ್ದಾರೆ.
ಗೋಪಾಲ ಸಿಂಗ್ ರಾಜಸ್ಥಾನ ಮೂಲದವರು. ಕುಮಟಾದ ಸುಭಾಷ್ ರಸ್ತೆಯಲ್ಲಿ ವಾಸವಾಗಿದ್ದರು. ಪೂರ್ಣ ಪ್ರಮಾಣದಲ್ಲಿ ಲಿಪ್ಟ ಕಾಮಗಾರಿ ಮಾಡಿಸದೇ ಕಾರ್ಮಿಕನನ್ನು ಅದರ ಮೇಲೆ ಹತ್ತಿಸಿದ ಕಾರಣ ನರೇಂದ್ರ ಸಿಂಗ್ ರಾತೋಡ್ (34) ಹಾಗೂ ಲಕ್ಷö್ಮಣ ಸಿಂಗ್ ರಾತೋಡ್ ಎಂಬಾತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.